ಸುಳ್ಯ ತಾಲೂಕು ಗುತ್ತಿಗೆದಾರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0

ಸುಳ್ಯ ತಾಲೂಕು ಲೋಕೋಪಯೋಗಿ ಮತ್ತು ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವು ಬಂಟರ ಭವನ ಕೇರ್ಪಳದಲ್ಲಿ ಆ.27 ರಂದು ನಡೆಯಿತು.

ಸಂಘದ ಅಧ್ಯಕ್ಷ ಕೃಷ್ಣ ಕುಮಾರ್ ಬಾಳುಗೋಡು ರವರು ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.

2024-27 ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ನಾಯ್ಕ್ ಉಪ್ಪಿನಂಗಡಿ ಯವರು ಪದ ಪ್ರಧಾನ ನೆರವೇರಿಸಿದರು.

ಮುಖ್ಯ ಅಭ್ಯಾಗತರಾಗಿ ಸೂಪರಿಂಟೆಂಡೆಂಟ್ ಇಂಜಿನಿಯರ್ ನರಸಿಂಹ ರಾಜ್ ಮಂಗಳೂರು, ಸರಕಾರದ ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿ, ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಸುಳ್ಯ ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹರೀಶ್ ಕಂಜಿಪಿಲಿ, ಆರ್.ಡಬ್ಲ್ಯೂ. ಎಸ್.ಎಸ್. ಎಕ್ಸಿಕ್ಯುಟಿವ್ ಇಂಜಿನಿಯರ್ ರಘುನಾಥ್, ಹಿರಿಯ ಗುತ್ತಿಗೆದಾರ ಗೋಪಾಲ ಕರೋಡಿ ಉಪಸ್ಥಿತರಿದ್ದರು.

ಆರಂಭದಲ್ಲಿ ಇತ್ತೀಚೆಗೆ ಅಪಘಾತದಲ್ಲಿ ಮೃತ ಪಟ್ಟಿರುವ ಹಿರಿಯ ಗುತ್ತಿಗೆದಾರ ಶಶಿಧರ ಆಲೆಟ್ಟಿ ಯವರಿಗೆ ಗಿರೀಶ್ ನಾರ್ಕೋಡು ನುಡಿನಮನ ಸಲ್ಲಿಸಿ ಒಂದು ನಿಮಿಷದ ಮೌನ ಪ್ರಾರ್ಥನೆ ಅರ್ಪಿಸಲಾಯಿತು.

ನೂತನಪದಾಧಿಕಾರಿಗಳಿಗೆ ಪದಪ್ರಧಾನ ನೆರವೇರಿಸಿದ ಬಳಿಕ ಸಂಘದ ನೂತನ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ರವರ ಅಧ್ಯಕ್ಷತೆಯಲ್ಲಿ ಸಭೆಯು ಮುಂದುವರಿಯಿತು. ಕಾರ್ಯದರ್ಶಿ ಮನುದೇವ ಪರಮಂಡಲ, ಖಜಾಂಜಿ ಗಿರೀಶ್ ನಾರ್ಕೋಡು ವೇದಿಕೆಯಲ್ಲಿದ್ದರು.

ಶಾಸಕರಿಗೆ ಮತ್ತು ಮುಂಡೋಡಿಯವರಿಗೆ ಸನ್ಮಾನ:

ಈ ಸಂದರ್ಭದಲ್ಲಿ ಶಾಸಕಿ ಕು.ಭಾಗೀರಥಿ ಮುರುಳ್ಯ ಹಾಗೂ ಭರತ್ ಮುಂಡೋಡಿ ಮತ್ತು ಇಂಜಿನಿಯರ್ ಮಣಿಕಂಠ ರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಕಟ್ಟಡ ನಿವೇಶನಕ್ಕೆ ಮತ್ತು ಮರಳು ಜಲ್ಲಿಯ ಸಮಸ್ಯೆ ನಿವಾರಣೆಗೆ ಮನವಿ:

ಗುತ್ತಿಗೆದಾರರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ಒದಗಿಸಿ ಕೊಡುವಂತೆ ಹಾಗೂ ಸುಳ್ಯದಲ್ಲಿ ಮರಳು ಮತ್ತು ಜಲ್ಲಿಯ ಸಮಸ್ಯೆಗೆ ಸೂಕ್ತ ಪರಿಹಾರದ ವ್ಯವಸ್ಥೆ ಕಲ್ಪಿಸುವಂತೆ ಸಂಘದ ವತಿಯಿಂದ ಮನವಿ ಮಾಡಲಾಯಿತು.

ಮುಂದಿನ ಸಾಲಿನ ಉಪಾಧ್ಯಕ್ಷರಾಗಿ ಶಬೀರ್ ಬಾಳಿಲ, ಪ್ರಶಾಂತ್ ಕಲ್ಲುಗುಂಡಿ, ಜತೆ ಕಾರ್ಯದರ್ಶಿಗಳಾಗಿ ಶ್ರೇಯಸ್ ಮುತ್ಲಾಜೆ, ಸುನಿಲ್ ರೈ ಮೇನಾಲ, ನಿರ್ದೇಶಕರಾಗಿ ನವೀನ್ ಸುಳ್ಳಿ, ಚಂದ್ರಶೇಖರ ಪನ್ನೆ, ಮಹೇಶ್ ಕುತ್ತಮೊಟ್ಟೆ, ಲೋಹಿತ್ ಹೊದ್ದೆಟ್ಟಿ, ರಾಜೇಶ್ ಕಿರಿಭಾಗ ರವರಿಗೆ ಪದ ಪ್ರಧಾನ ನೆರವೇರಿಸಿದರು.


ಸಂಘದಗೌರವ ಸಲಹೆಗಾರರಾಗಿ ಭರತ್ ಮುಂಡೋಡಿ, ವೆಂಕಟ್ ವಳಲಂಬೆ, ಪಿ.ಸಿ ಜಯರಾಮ, ಹರೀಶ್ ಕಂಜಿಪಿಲಿ, ಸುಭೋದ್ ಶೆಟ್ಟಿ ಮೇನಾಲ, ಹರೀಶ್ ರೈ ಉಬರಡ್ಕ, ಬಾಲಚಂದ್ರ ಅಡ್ಕಾರ್, ಇಬ್ರಾಹಿಂ ಪಲ್ಲತಡ್ಕ, ರಾಜೇಂದ್ರ ಪ್ರಸಾದ್ ಶೆಟ್ಟಿ, ಚಂದ್ರಶೇಖರ ಅಡ್ಪಂಗಾಯ, ವೆಂಕಪ್ಪ ನೆಕ್ರಾಜೆ, ಸುನಿಲ್ ರೈ ಪುಡ್ಕಜೆ, ರವಿಪ್ರಸಾದ್ ಕೇರ್ಪಳ, ಕರುಣಾಕರ ರೈ ಯವರು ಆಯ್ಕೆ ಯಾದರು.

ಶ್ರೀಮತಿ ಸೌಮ್ಯ ಪ್ರಾರ್ಥಿಸಿದರು. ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಸ್ವಾಗತಿಸಿದರು. ಖಜಾಂಜಿ ಸುಭೋದ್ ಶೆಟ್ಟಿ ಮೇನಾಲ ರವರು ಗುತ್ತಿಗೆದಾರರ ಸಮಸ್ಯೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮನು ದೇವ್ ಪರಮಲೆ ವಂದಿಸಿದರು. ಇಂಜಿನಿಯರ್ ನವನೀತ್ ರೈ ಪೇರಾಲು ಕಾರ್ಯಕ್ರಮ ನಿರೂಪಿಸಿದರು.


ಕಾರ್ಯಕ್ರಮದಲ್ಲಿ ತಾಲೂಕು ಇಲಾಖೆಯ ಅಧಿಕಾರಿ ವರ್ಗದವರು, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಪ್ರಮುಖರು, ಗುತ್ತಿಗೆದಾರರ ಸಂಘದ ಸದಸ್ಯರು ಭಾಗವಹಿಸಿದರು. ಆಗಮಿಸಿದ ಎಲ್ಲರಿಗೂ ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.