ಸುನ್ನಿ ಸಂಯುಕ್ತ ಜಮಾಹತ್ ಸಮಿತಿ ಸುಳ್ಯ ಇದರ ಮಹಾಸಭೆ ಹಾಗೂ ಖಾಝಿ ಕೂರತ್ ತಂಙಳ್ ರವರ ಅನುಸ್ಮರಣೆ

0

ನೂತನ ಅಧ್ಯಕ್ಷರಾಗಿ ಮಹಮ್ಮದ್ ಕುಂಞಿ ಗೂನಡ್ಕ ,ಕಾರ್ಯದರ್ಶಿ ಹಮೀದ್ ಬೀಜಕೊಚ್ಚಿ, ಕೋಶಾಧಿಕಾರಿ ಹಾಜಿ ಕೆ. ಎಂ. ಮುಸ್ತಫಾ



ಬಹು ಅಸಯ್ಯಿದ್ ಖಾಝಿ ಕೂರತ್ ತಂಙಳ್ ರವರನ್ನು ಖಾಝಿ ಯಾಗಿ ಭೈಹತ್ ಮಾಡಿದ್ದ 15 ಜಮಾಅತ್ ಗಳ ಸುನ್ನೀ ಸಂಯುಕ್ತ ಜಮಅತ್ ಸಮಿತಿ ಸುಳ್ಯ ಇದರ 2024.25 ನೇ ಸಾಲಿನ ಮಹಾಸಭೆ ಹಾಗೂ ನಮ್ಮನ್ನಗಲಿದ ಖಾಝಿಯವರ ಅನುಸ್ಮರಣೆ ಕಾರ್ಯಕ್ರಮ ‌ಆ.27 ರಂದು ಸುಳ್ಯ ಗಾಂಧಿನಗರ ಮುನವ್ವಿ ರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಅಬ್ದುಸಮದ್ ಹಾಜಿ ಮೋಗರ್ಪಣೆ
ಯವರ ಅಧ್ಯಕ್ಷತೆ ಯಲ್ಲಿ ಜರಗಿತು.

ಗಾಂಧಿನಗರ ಮದರಸ ಸದರ್ ಉಸ್ತಾದ್ ಸಿರಾಜುದ್ದೀನ್ ಸಖಾಫಿ ದುವಾ ನೆರವೇರಿಸಿದರು.
ಜಾಫರ್ ಸಅದಿ ಖತೀಬ್ ಜೆ.ಎಂ ನಿಂತಿಕಲ್ಲು ರವರು ಉದ್ಘಾಟಿಸಿದರು.

ಅಶ್ರಫ್ ಖಾಮಿಲ್ ಸಖಾಫಿ ಗಾಂಧಿನಗರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ಅನುಸ್ಮರಣಾ ಭಾಷಣ ಮಾಡಿದರು.
ಪ್ರಧಾನ ಕಾರ್ಯದರ್ಶಿ ಉಮ್ಮರ್ ಸೀಗೆಯಡಿ ವರದಿ ಮತ್ತು ಜಮಾಖರ್ಚನ್ನುಮಂಡಿಸಿದರು.

ನಂತರ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು..

15 ಜಮಾಹತಿನ ಖತೀಬ್ ಉಸ್ತಾ ದರುಗಳ ಸಲಹಾ ಸಮಿತಿ ಮತ್ತು 47 ಸದಸ್ಯರ ಸಮಿತಿಯನ್ನು ರಚಿಸಲಾಯಿತು..

ಅಧ್ಯಕ್ಷರಾಗಿ ಮುಹಮ್ಮದ್ ಕುಂಞ ಗೂನಡ್ಕ
,ಪ್ರಧಾನ ಕಾರ್ಯದರ್ಶಿಅಬ್ದುಲ್ ಹಮೀದ್ ಬೀಜಕೊಚ್ಚಿ ,
ಕೋಶಾಧಿಕಾರಿ ಯಾಗಿಹಾಜಿ ಮುಸ್ತಫಾ ಜನತಾ
ಉಪಾಧ್ಯಕ್ಷರುಗಳಾಗಿ ಉಮರ್ ಸೀಗೆಯಡಿ, ಅಬೂಬಕ್ಕರ್ ಪೆರಾಜೆ. ಇಸ್ಮಾಯಿಲ್ ಸಹದಿ, ಕುಂಭಕೋಡು, ಅಬ್ದುಲ್ ರೆಹಮಾನ್ ಮೊಗರ್ಪಣೆ,
ಕಾರ್ಯದರ್ಶಿಗಳಾಗಿ ಕೆಎಂ ಅಬ್ದುಲ್ ಹಮೀದ್ ಸುಣ್ಣ ಮೂಲೆ. ಹಸೈನಾರ್ ವಳಲಂಬೆ ಗುತ್ತಿಗಾರು, ವೈ ಕೆ ಸುಲೇಮಾನ್ ಹಾಜಿ ಇಂದ್ರಾಜೆ. ಕೆಎಚ್ ಉಮರ್ ಮೇನಾಲ
ಹಾಗೂ 36 ಮಂದಿ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು
ಸುನ್ನೀ ಸಂಯುಕ್ತ ಜಮಾಹತ್ ಪ್ರಧಾನ ಕಾರ್ಯದರ್ಶಿ ಉಮರ್ ಸೀ ಗೆಯಡಿ ಯಾವರು ಸ್ವಾಗತಿಸಿದರು ಕೆ ಎಂ ಅಬ್ದುಲ್ ಹಮೀದ್ ಸುಣ್ಣ ಮೂಲೆ ಕಾರ್ಯಕ್ರಮ ನಿರೂಪಿಸಿದರು.