ಕೆವಿಜಿ ಐಪಿಎಸ್ ನಲ್ಲಿ ಗುಂಪು ಚರ್ಚಾ ಕಾರ್ಯಾಗಾರ

0

ಅಭ್ಯಾಸದೊಂದಿಗೆ ಗುಂಪು ಚಟುವಟಿಕೆಯಲ್ಲಿ ಪ್ರಗತಿ ಕಾಣಲು ಸಾಧ್ಯ : ಪ್ರೊ. ಪ್ರಶಾಂತ್ ಕೆ.

ಮಾತಿನ ಬೆಳವಣಿಗೆಗೆ ಗುಂಪು ಚರ್ಚೆ ಅತಿ ಅಗತ್ಯ: ಅರುಣ್ ಕುಮಾರ್

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಆ. 31 ರಂದು ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆಯವರ ಮಾರ್ಗದರ್ಶನದಂತೆ, “ವಿದ್ಯಾರ್ಥಿಗಳ ಮಾತಿನ ಕೌಶಲ್ಯ ಮತ್ತು ಜ್ಞಾನದ ಬೆಳವಣಿಗೆ ಅತಿ ಅಗತ್ಯ”, ಎಂಬ ವಿಚಾರವಾಗಿ ಗುಂಪು ಚರ್ಚಾ ಕಾರ್ಯಕ್ರಮವನ್ನು ಆ. 31ರಂದು ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ.ವಿ ಶುಭ ಹಾರೈಸಿದರು.


ಕಾರ್ಯಕ್ರಮಕ್ಕೆ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ಡಿಪಾರ್ಟ್ಮೆಂಟ್ ನ ಪ್ರೊ. ಪ್ರಶಾಂತ್ ಕೆ ತರಬೇತುದಾರರಾಗಿ ಆಗಮಿಸಿ, “ವಿದ್ಯಾರ್ಥಿಗಳಿಗೆ ಬಡತನವ ತೊಲಗಿಸಲು ಶಿಕ್ಷಣವೊಂದೇ ದಾರಿ. ಆದುದರಿಂದ ಅಭ್ಯಾಸದ ಮೂಲಕ ನಾವು ಗುಂಪು ಚಟುವಟಿಕೆಯಲ್ಲಿ ಪ್ರಗತಿಯನ್ನು ಕಾಣಬೇಕು”, ಎಂದು ವಿದ್ಯಾರ್ಥಿಗಳಿಗೆ ಹಲವಾರು ಮಾಹಿತಿಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಹತ್ತನೇ ತರಗತಿಯ ಆದಿತ್ ರೈ, ಅನೀಶ್, ಅದ್ವೈತ್, ಉತ್ಸವ್, ಧನ್ವಿ, ಸಾನ್ವಿ ಮತ್ತು ಸಮೃದ್ಧಿಯು ರಾಷ್ಟ್ರೀಯ ಹೊಸ ಶಿಕ್ಷಣ ನೀತಿ -2020 ಎಂಬ ವಿಷಯದ ಬಗ್ಗೆ ಗುಂಪು ಚರ್ಚೆ ನಡೆಸಿದರೆ, 9ನೇ ತರಗತಿಯ ವಿದ್ಯಾರ್ಥಿಗಳಾದ ಸಲ್ಮಾನುಲ್ ಫಾರೀಸ್, ಕೃತಾರ್ಥ್, ಮನ್ವಿತಾ, ಶ್ರದ್ಧಾ ಪೈ, ಸೋನಾ ನಾರ್ಕೋಡು ಮತ್ತು ಅಲಿಸ್ಬ ಸಾರಾ ಜಾಗತಿಕ ತಾಪಮಾನಕ್ಕೆ ಕಾರಣ, ಪರಿಣಾಮ ಮತ್ತು ಅದರ ಪರಿಹಾರದ ಬಗ್ಗೆ ಗುಂಪು ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್, “ವಿದ್ಯಾರ್ಥಿಗಳಿಗೆ ಇದೊಂದು ಅತ್ಯುತ್ತಮವಾದ ಕಾರ್ಯಕ್ರಮ. ವಿದ್ಯಾರ್ಥಿಗಳಲ್ಲಿ ಮಾತಿನ ಬೆಳವಣಿಗೆಗೆ ಗುಂಪು ಚರ್ಚೆ ಅತಿ ಅಗತ್ಯ”, ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರೊ. ಆಕಾಶ್, ಪ್ರೊ. ರಮ್ಯ, ಪ್ರೊ. ಶ್ರುತಿ ಕೆವಿಜಿ ಐಪಿಎಸ್‌ನ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ , ಶಾಲಾ ಸಾಂಸ್ಕೃತಿಕ ಸಂಯೋಜನಾಧಿಕಾರಿ ಪ್ರಜ್ಞಾ ಡಿ.ಆರ್ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಎಂಟನೇ ತರಗತಿಯ ನಮೀಷ್ ಮತ್ತು ಮನಸ್ವಿ ಕಾರ್ಯಕ್ರಮ ನಿರೂಪಿಸಿ, ನಿನಾದ ವಂದಿಸಿದರು.