ಎಣ್ಮೂರು ಸ.ಹಿ.ಪ್ರಾ, ಶಾಲಾ ನೂತನ ಎಸ್.ಡಿ.ಎಂ.ಸಿ ರಚನೆ

0

ಎಣ್ಮೂರು ಸ.ಹಿ.ಪ್ರಾ. ಶಾಲಾ ನೂತನ ಎಸ್.ಡಿ.ಎಂ.ಸಿ ಸೆ. 3ರಂದು ರಚನೆಯಾಯಿತು.

ಅಧ್ಯಕ್ಷರಾಗಿ ಅಬ್ದುಲ್ ಶರೀಫ್ ಎರಡನೇ ಬಾರಿಗೆ ಆಯ್ಕೆಯಾದರು.


ಉಪಾಧ್ಯಕ್ಷರಾಗಿ ವನಿತಾ ರೈ, ನೂತನ ಸದಸ್ಯರಾಗಿ ಕೊರಗಪ್ಪ, ರಘು ಕಟ್ಟ, ಮೋಹಿನಿ, ನಳಿನಾಕ್ಷಿ, ಚಂದ್ರಶೇಖರ, ಮಹಮ್ಮದ್, ಅಬ್ದುಲ್ ನಾಸಿರ್, ಸುಲೈಮಾನ್, ರಹಮತ್, ಕೌಲತ್, ಕೈರುನ್ನಿಸ, ಆಮಿನ, ಸುನೀತಾ ರೈ, ಸತೀಶ್ ಕೆ, ಜುಬೈದ ಮತ್ತು ನೇತ್ರ ಆಯ್ಕೆಯಾದರು.

ಈ ಸಂದರ್ಭದಲ್ಲಿ ಎಡಮಂಗಲ ಗ್ರಾ.ಪಂ. ಸದಸ್ಯ ಮಾಯಿಲಪ್ಪ ಗೌಡ ಪಟ್ಟೆ, ಮುಖ್ಯ ಗುರುಗಳಾದ ಭುವನೇಶ್ವರಿ ಕೆ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಶಾಂತಮ್ಮ ಸ್ವಾಗತಿಸಿ, ಸುರೇಖಾ ವಂದಿಸಿದರು.