ಅರಂಬೂರು ವಯನಾಟ್ ಕುಲವನ್ ದೈವಸ್ಥಾನದಲ್ಲಿ ರಾಶಿಚಿಂತನೆ-ದೈವಂಕಟ್ಟು ಮಹೋತ್ಸವ ಸಮಿತಿ ರಚನೆ

0

ಅಧ್ಯಕ್ಷ-ಪಿ.ಬಿ.ಸುಧಾಕರ ರೈ, ಪ್ರ.ಕಾರ್ಯದರ್ಶಿ- ಪವಿತ್ರನ್ ಗುಂಡ್ಯ, ಕೋಶಾಧಿಕಾರಿ -ಜತ್ತಪ್ಪ ರೈ ಅರಂಬೂರು

ಕುತ್ತಿಕೋಲು ಶ್ರೀ ತಂಬುರಾಟ್ಟಿ ಕ್ಷೇತ್ರ ಪರಿಧಿಯ ಸುಳ್ಯ ಪ್ರಾದೇಶಿಕ ಸಮಿತಿ ಗೊಳಪಡುವ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಕುತ್ತಿಕೋಲು ಶ್ರೀ ತಂಬುರಾಟ್ಟಿ ಭಗವತಿ ಕ್ಷೇತ್ರದ ಪ್ರಧಾನ ಸ್ಥಾನಿಕರ ನೇತೃತ್ವದಲ್ಲಿ ಸೆ.8ರಂದು ರಾಶಿ ಚಿಂತನೆಯು ದೈವಜ್ಞರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮುಂದಿನ ೨೦೨೫ ರಲ್ಲಿ ನಡೆಸಲು ಉದ್ದೇಶಿಸಿರುವ ವಯನಾಟ್ ಕುಲವನ್ ದೈವದ ದೈವಂಕಟ್ಟು ಮಹೋತ್ಸವಕ್ಕೆನೂತನ ಸಮಿತಿಯನ್ನು ರಚಿಸಲಾಯಿತು.

ಕೇರಳದ ದೈವಜ್ಞರಾದ ಪಂಕಜಾಕ್ಷ ಕುಂಡAಕುಯಿ ಯವರ ರಾಶಿ ಚಿಂತನೆಯ ಪ್ರಕಾರ ೨೦೨೫ ಮಾರ್ಚ್ ೧೫,೧೬,೧೭ ಮತ್ತು ೧೮ ರಂದು ದೈವಂಕಟ್ಟು ಮಹೋತ್ಸವವು ನಡೆಯಲಿದ್ದು ಧಾನ್ಯ ಅಳೆಯುವ ಕಾರ್ಯಕ್ರಮ ಫೆ.೨೦ ರಂದು ನಡೆಯಲಿದೆ. ಮಹೋತ್ಸವದ ಕರ್ಮಿಗಳ ಆಯ್ಕೆ ಪ್ರಕ್ರಿಯೆಯನ್ನು ಮಾಡಲಾಯಿತು. ಕುತ್ತಿಕೋಲು ತಂಬುರಾಟ್ಟಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಕುಂಞಕಣ್ಣನ್ ಬೇಡಗಂ ರವರ ಅಧ್ಯಕ್ಷತೆಯಲ್ಲಿ ಸಮಿತಿ ರಚನಾ ಸಭೆಯು ನಡೆಯಿತು.
ಈ ಸಂದರ್ಭದಲ್ಲಿ ದೈವಂಕಟ್ಟು ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಪಿ.ಬಿ.ಸುಧಾಕರ ರೈ, ಪ್ರಧಾನ ಕಾರ್ಯದರ್ಶಿ ಪವಿತ್ರನ್ ಗುಂಡ್ಯ, ಕೋಶಾಧಿಕಾರಿ ಜತ್ತಪ್ಪ ರೈ ಅರಂಬೂರು ರವರನ್ನು ಆಯ್ಕೆ ಮಾಡಲಾಯಿತು. ಬಳಿಕ ಉಪ ಸಮಿತಿಯ ನ್ನು ರಚಿಸಲಾಯಿತು.

ವೇದಿಕೆಯಲ್ಲಿ ಉತ್ತರ ಮಲಬಾರ್ ತೀಯ ಸಮುದಾಯ ಕ್ಷೇತ್ರ ಸಂರಕ್ಷಣಾ ಸಮಿತಿ ಪ್ರ.ಕಾರ್ಯದರ್ಶಿ ನಾರಾಯಣ ಕೊಳತ್ತೂರು, ಕುತ್ತಿಕೋಲು ಕ್ಷೇತ್ರ ಪ್ರ.ಕಾರ್ಯದರ್ಶಿ ಶ್ರೀಧರನ್ ಪರಯಂಪಳ್ಳ
ಸ್ಥಳೀಯ ಪ್ರಮುಖರಾದ ಶ್ರೀಪತಿ ಭಟ್ ಮಜಿಗುಂಡಿ,ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯ.ಸ.ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ,ಕೊರಗಪ್ಪ ಮಾಸ್ತರ್ ಕಣಕ್ಕೂರು, ನಾರಾಯಣ ಕೇಕಡ್ಕ, ಕುಂಞರಾಮನ್ ಶ್ರೀ ಶೈಲಂ, ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಬಾರ್ಪಣೆ, ಕುಂಞಕಣ್ಣ ಸ್ಥಾನದ ಮನೆ, ರದೀಶನ್ ಸ್ಥಾನದ ಮನೆ ಉಪಸ್ಥಿತರಿದ್ದರು. ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪವಿತ್ರನ್ ಗುಂಡ್ಯ ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಕುತ್ತಿಕೋಲು ತಂಬುರಾಟ್ಟಿ ಭಗವತಿ ಕ್ಷೇತ್ರದ ಪ್ರಧಾನ ಸ್ಥಾನಿಕರು ಹಾಗೂ ಸ್ಥಳೀಯ ಪ್ರಮುಖರಾದ ಎನ್.ಎ.ರಾಮಚಂದ್ರ, ಜಯಪ್ರಕಾಶ್ ಕುಂಚಡ್ಕ, ಧನಂಜಯ ಕುಂಚಡ್ಕ, ರಾಧಾಕೃಷ್ಣಪರಿವಾರಕಾನ, ಜಯಪ್ರಕಾಶ್ಅರಂಬೂರು,, ಶಿವರಾಮ ಗೌಡ ಕಲ್ಲೆಂಬಿ, ಅಚ್ಚುತ ಮಾಸ್ತರ್ ನಾರ್ಕೋಡು, ಬಿಪಿನ್ ಗೌಡ ಕುಡೆಕಲ್ಲು, ಪದ್ಮಯ್ಯ ಗೌಡ ಕುಂಬಳಚೇರಿ, ಸತ್ಯ ಪ್ರಸಾದ್ ಗಬ್ಬಲ್ಕಜೆ, ಅಮ್ಮು ರೈ ಅರಂಬೂರು,ರತ್ನಾಕರ ರೈ ಅರಂಬೂರು, ಕೃಷ್ಣಪ್ಪ ಗೌಡ ಕೆದಂಬಾಡಿ, ಎಸ್.ಎನ್.ಮನ್ಮಥ ಅಡ್ಪಂಗಾಯ,ರಾಮ ಮಣಿಯಾಣಿ ಆಲೆಟ್ಟಿ, ಸತ್ಯ ಕುಮಾರ್ ಆಡಿಂಜ, ಕಾರ್ಯಪ್ಪ ಗೌಡ ಕಲ್ಲೆಂಬಿ,ಗೋಕುಲ್ ದಾಸ್, ಸುದರ್ಶನ ಪಾತಿಕಲ್ಲು, ಲಕ್ಷ್ಮಣ ಗೌಡ ಪರಿವಾರ, ಎ.ಸಿ ವಸಂತ ಅಮೆಚೂರು, ರಾಜು ಪಂಡಿತ್, ಚಂದ್ರಶೇಖರ ನೆಡ್ಚಿಲು,ರಾಧಾಕೃಷ್ಣ ಕೋಲ್ಚಾರು, ಪದ್ಮಯ್ಯ ಪಡ್ಪು, ಪುಷ್ಪರಾಜ್ ಕುಲಾಲ್, ಸುರೇಶ್ ಪರಿವಾರಕಾನ, ಅಶೋಕ ಪೀಚೆ, ಸುದೇಶ್ ಅರಂಬೂರು,ನಾರಾಯಣನಾಯ್ಕ್ ಅರಂಬೂರು, ಜೆ.ಕೆ.ರೈ ,ಜನಾರ್ದನ ಕಲ್ಚೆರ್ಪೆ, ಬಾಬು ಅಜಿಲ ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.