ಕೋಟೆಮುಂಡುಗಾರಿನಲ್ಲಿ 33ನೇ ವರ್ಷದ ಶ್ರೀ ಗಣೇಶೋತ್ಸವ

0

“ಮಕರಾಕ್ಷ ಕಾಳಗ” ಯಕ್ಷಗಾನ ಪ್ರದರ್ಶನ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಟೆಮುಂಡುಗಾರು ಇದರ ವತಿಯಿಂದ ಕಳಂಜ ಯುವಕ ಮಂಡಲದಲ್ಲಿ ಶ್ರೀ ಗಣೇಶೋತ್ಸವ ನಡೆಯಿತು.
ಪ್ರತಿಷ್ಠೆ ನಡೆಯಿತು.

ಬೆಳಗ್ಗೆ ಮೂರ್ತಿ ಪ್ರತಿಷ್ಠಾಪನೆ, ಬಳಿಕ ಒಂದು ಗಂಟೆ ಭಜನಾ ಕಾರ್ಯಕ್ರಮ ನಡೆಯಿತು. ಗಣಪತಿ ಹವನ, ಅಕ್ಷರಾಭ್ಯಾಸ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಗಣೇಶೋತ್ಸವ ಅಂಗವಾಗಿ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಣೆ ನಡೆಸಲಾಯಿತು. ಮಧ್ಯಾಹ್ನ ಭೋಜನ ನಡೆದು ಅಪರಾಹ್ನ ಯುವಕ ಮಂಡಲ ಕಳಂಜ ಮತ್ತು ಹವ್ಯಾಸಿ ಕಲಾವಿದರಿಂದ “ಮಕರಾಕ್ಷ ಕಾಳಗ” ಯಕ್ಷಗಾನ ಪ್ರದರ್ಶನ ನಡೆಯಿತು.

ಬಳಿಕ ಸಂಜೆಯ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ಬಳಿಕ ಬ್ಯಾಂಡ್ ವಾಲಗ, ಸಿಂಗಾರಿ ಮೇಳ ಶೋಭಾಯಾತ್ರೆ ನಡೆದು ಅಯ್ಯನಕ ಕಟ್ಟೆ ಹೊಳೆಯಲ್ಲಿ ಮೂರ್ತಿವಿಸರ್ಜನೆ ನಡೆಯಿತು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ದಿವಾಕರ ಕಾವಿನ ಮೂಲೆ, ಗೌರವಾಧ್ಯಕ್ಷ ರಾಮಯ್ಯ ರೈ, ಸ್ಥಾಪಕ ಕಾರ್ಯದರ್ಶಿ ಶ್ರೀಕೃಷ್ಣ ಚೊಕ್ಕಾಡಿ, ಕಾರ್ಯದರ್ಶಿ ಲಕ್ಷ್ಮೀಶ ಕಜೆಮೂಲೆ, ಜೊತೆ ಕಾರ್ಯದರ್ಶಿ ದಿನೇಶ್ ಪಾಂಡಿಪಾಲು,ಕೋಶಾಧಿಕಾರಿ ಚಂದ್ರಶೇಖರ ಕಜೆಮೂಲೆ, ಉಪಾಧ್ಯಕ್ಷ ಶಿವಪ್ರಸಾದ್ ಮುಂಡುಗಾರು, ಕ್ರೀಡಾ ಕಾರ್ಯದರ್ಶಿ ಸತೀಶ ದಳ, ಸಾಂಸ್ಕೃತಿಕ ಕಾರ್ಯದರ್ಶಿ ಮಧುರಾ ಗಂಗಾಧರ ಆದಿಯಾಗಿ ಸಮಿತಿಯ ಸದಸ್ಯರು ಕಾರ್ಯಕ್ರಮ ಯಶಸ್ವಿಗೆ ದುಡಿದರು.