ರೆಂಜಾಳ‌ : ಶಾಸ್ತಾವು ಯುವಕ ಮಂಡಲದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ – ನಿವೃತ್ತ ಯೋಧರಿಗೆ ಸನ್ಮಾನ-ಧಾರ್ಮಿಕ ಉಪನ್ಯಾಸ

0

ಮರ್ಕಂಜದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ರೆಂಜಾಳ ಶ್ರೀ ಶಾಸ್ತಾವು ಯುವಕ ಮಂಡಲದ ವತಿಯಿಂದ 4ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಪ್ರಯುಕ್ತ ಗೋಪುರ ಮೊಸರು ಕುಡಿಕೆ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಇಂದು ರೆಂಜಾಳ ಕ್ಷೇತ್ರದ ಶ್ರೀ ವಿನಾಯಕ‌ ಸಭಾಭವನದಲ್ಲಿ‌ ನಡೆಯಿತು.

ಸಂಜೆ ಸಮಾರೋಪ ಸಮಾರೋಪ ನಡೆಯಿತು.‌ ಈ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಬೇರಿಕೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಉಮೇಶ್ ದೊಡ್ಡತೋಟರವರನ್ನು ಯುವಕ ಮಂಡಲದ ವತಿಯಿಂದ ಸನ್ಮಾನಿಸಲಾಯಿತು.

ಶ್ರೀ ಶಾಸ್ತವೇಶ್ವರ ದೇವಸ್ಥಾನ ಕರ್ಲಪ್ಪಾಡಿ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಮೇನಾಲ ಧಾರ್ಮಿಕ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಮರ್ಕಂಜ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೀಶ್ವರ ಸಿದ್ಧಮಠ ಧರ್ಮದರ್ಶಿಗಳಾದ ರಾಜೇಶ್ ನಾಥ್ ಜಿ, ಅಟಲ್ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ ಅಧ್ಯಕ್ಷ ಹರೀಶ್ ಕಂಜಿಪಿಲಿ, ಅರಂತೋಡು – ತೊಡಿಕಾನ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ, ಶ್ರೀ ಕ್ಷೇತ್ರ ರೆಂಜಾಳದ ಸೇವಾ ಸಮಿತಿ ಅಧ್ಯಕ್ಷ ಪುಟ್ಟಣ್ಣ ಗೌಡ ಬಾಣೂರು, ಜನನಿ ಫ್ರೆಂಡ್ಸ್ ಗುಂಡ್ಯ ಆಲೆಟ್ಟಿ ಇದರ ಗೌರವಾಧ್ಯಕ್ಷ ಲತೀಶ್ ಗುಂಡ್ಯ, ಮರ್ಕಂಜ ಗ್ರಾ.ಪಂ. ಸದಸ್ಯರಾದ ಗೋವಿಂದ ಅಳವುಪಾರೆ, ಯಶವಂತ ಸೂಟೆಗದ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಯನಾಡಿನಲ್ಲಿ ನಡೆದ ಭೀಕರ ಜಲಪ್ರಳಯಕ್ಕೆ ತುತ್ತಾದ ಜಾಗಕ್ಕೆ ಸುಳ್ಯದ ಸೇವಾ ಭಾರತಿ ತಂಡದೊಂದಿಗೆ ತೆರಳಿ ಶ್ರಮಸೇವೆಯಲ್ಲಿ ತೊಡಗಿದ ಶಾಸ್ತಾವು ಯುವಕ ಮಂಡಲದ ರಾಜೇಶ್ ಬೇರಿಕೆ, ಪ್ರಸಾದ್ ಜೋಗಿಮೂಲೆ, ಸಂಜೀತ್ ಹೈದಂಗೂರು, ವಿಶ್ವನಾಥ, ಹರ್ಷಿತ್ ಕೋಡಿ, ಮಹೇಶ್ ಕಂಜಿಪಿಲಿ, ಚರಣ್ ರಾಜ್ ಕಾಪಿಲರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯದರ್ಶಿ ಪದ್ಮನಾಭ ವರದಿ ವಾಚಿಸಿದರು. ರಾಜೇಶ್ ಮಾಸ್ತರ್ ರೆಂಜಾಳ ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು. ಐತ್ತ ರೆಂಜಾಳ ಮತ್ತು ರಾಜೇಶ್ ಮಾಸ್ತರ್ ಸನ್ಮಾನಿತರ ಪರಿಚಯ ಮಾಡಿದರು. ನವೀನ್ ಬಾಂಜಿಕೋಡಿ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನೆ : ಬೆಳಿಗ್ಗೆ ಕಾರ್ಯಕ್ರಮ ದ ಉದ್ಘಾಟನೆ ನಡೆಯಿತು.‌


ರೆಂಜಾಳ ಕ್ಷೇತ್ರದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಬಳ್ಳಕ್ಕಾನ ದೀಪ ಬೆಳಗಿಸಿ ಉದ್ಘಾಟಿಸಿದರು.


ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಬೇರಿಕೆ‌ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮರ್ಕಂಜ ಗ್ರಾ.ಪಂ.‌ಅಧ್ಯಕ್ಷೆ ಗೀತಾ ಹೊಸೊಳಿಕೆ, ಮರ್ಕಂಜ ಪಂಚಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿ‌ ನಿಕಟಪೂರ್ವಾಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಉಪಾಧ್ಯಕ್ಷ ವಿಜಯಕುಮಾರ್ ಉಬರಡ್ಕ ಉಪಸ್ಥಿತರಿದ್ದರು. ‌