ಸಂಪಾಜೆ: ಹಾಸ್ಟೆಲ್ ನಲ್ಲಿ ಬಾಲಕನ ಮರ್ಮಾಂಗ ಹಿಡಿದೆಳೆದ ಸಹಪಾಠಿಗಳು

0

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ

ಹಾಸ್ಟೆಲ್ ನಲ್ಲಿ ಉಳಿದು ಶಾಲೆಗೆ ಹೋಗುತ್ತಿದ್ದ ಬಾಲಕನೋರ್ವನ ಮರ್ಮಾಂಗವನ್ನು ಸಹಪಾಠಿ ವಿದ್ಯಾರ್ಥಿಗಳು ಹಿಡಿದೆಳೆದ ಪರಿಣಾಮವಾಗಿ ಮರ್ಮಾಂಗಕ್ಕೆ ಏಟಾಗಿ ಬಾತುಕೊಂಡಿದ್ದು, ಬಾಲಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಸಂಪಾಜೆಯಿಂದ ವರದಿಯಾಗಿದೆ.

ದ.ಕ. ಸಂಪಾಜೆಯ ಆಲಡ್ಕ ನಿವಾಸಿಯಾಗಿರುವ 12 ವರ್ಷ ವಯಸ್ಸಿನ ಬಾಲಕ ಕಳೆದ ಕೆಲ ಸಮಯಗಳಿಂದ ಕೊಡಗು ಸಂಪಾಜೆಯ ಹಾಸ್ಟೆಲ್ ನಲ್ಲಿದ್ದು ಶಾಲೆಗೆ ಹೋಗುತ್ತಿದ್ದ.


ಸೆ.14ರಂದು ರಾತ್ರಿ ಹಾಸ್ಟೆಲ್ ನಲ್ಲಿ ಇಬ್ಬರು ಸಹಪಾಠಿ ವಿದ್ಯಾರ್ಥಿಗಳು ಬಾಲಕನ ಮರ್ಮಾಂಗವನ್ನು ಹಿಡಿದೆಳೆದಿದ್ದರು. ಬಾಲಕ ಬಳಿಕ ಮೂತ್ರ ವಿಸರ್ಜನೆ ಮಾಡುವ ವೇಳೆ ನೋವಾಗುತ್ತಿದ್ದ ಮನೆಗೆ ಬಂದಿದ್ದನೆನ್ನಲಾಗಿದೆ. ಮೊದಲು ಯಾರೊಡನೆಯೂ ವಿಷಯ ತಿಳಿಸಿರದಿದ್ದ ಬಾಲಕ ಮರ್ಮಾಂಗ ಬಾತುಕೊಂಡಿದ್ದರಿಂದ ತಾಯಿಯೊಡನೆ ವಿಷಯ ತಿಳಿಸಿದನೆನ್ನಲಾಗಿದೆ. ಬಳಿಕ ಮನೆಯವರು ಮತ್ತು ಬಂಧುಗಳು ಸೇರಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ದರೆಂದೂ, ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತೆಂದೂ ತಿಳಿದುಬಂದಿದೆ. ಅಲ್ಲಿ ಚಿಕಿತ್ಸೆ ನಿನ್ನೆ ಬಾಲಕನಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.
ಈಗ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ.


ಸಂಪಾಜೆ ಪೋಲೀಸ್ ಹೊರಠಾಣೆಯಲ್ಲಿ ಪ್ರಕರಣ ದಾಖಲಾಗಿ, ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯಲಿದೆ.

ಬಾಲಕನ ತಂದೆ ಅಸೌಖ್ಯದಿಂದಾಗಿ ನಿಧನ

ಈ ನಡುವೆ ಕಳೆದ ಹಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಈ ಬಾಲಕನ ತಂದೆ ರಾಜು ಆಲಡ್ಕ ಅವರು ಸೆ.20ರಂದು ನಿಧನರಾಗಿದ್ದಾರೆ.