ಸೆ.12 ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಹೊಸ್ತಾರೋಗಣೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ.12ರಂದು ಹೊಸ್ತಾರೋಗಣೆ(ನವಾನ್ನ ಪ್ರಸಾದ) ನೆರವೇರಲಿದೆ. ಈ ನಿಮಿತ್ತ ಪ್ರಾತ:ಕಾಲ 5.15 ಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ, 7.30 ಕ್ಕೆ ತೆನೆ ತರುವುದು ಹಾಗೂ ಕದಿರು ಪೂಜೆ ನಡೆಯಲಿರುವುದು. ಬೆಳಗ್ಗೆ 8 ರ ಬಳಿಕ ದೇವಳದ ನೌಕರರಿಗೆ ಮತ್ತು ಸ್ಥಳೀಯ ಭಕ್ತರಿಗೆ ಕದಿರು ವಿತರಣೆ ನಡೆಯಲಿದೆ.

ದರುಶನದಲ್ಲಿ ವ್ಯತ್ಯಯ: ಹೊಸ್ತಾರೋಗಣೆ ದಿನ ಬೆಳಗ್ಗೆ 10 ಗಂಟೆಯ ನಂತರ ಶ್ರೀ ದೇವರ ದರುಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಅಲ್ಲದೆ ಆಶ್ಲೇಷ ಬಲಿ ಸೇವೆಯು ಬೆಳಗ್ಗೆ 9 ಗಂಟೆಯ ನಂತರ 2 ಪಾಳಿಯಲ್ಲಿ ನಡೆಯಲಿದೆ. ಭಕ್ತಾಧಿಗಳು ಸಹಕರಿಸಬೇಕು ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.