ಜೇಸಿಐ ಸುಳ್ಯ ಸಿಟಿ ಘಟಕದ ಡೈಮಂಡ್- 2024 ಜೇಸಿಐ ಸಪ್ತಾಹದ ಉದ್ಘಾಟನೆ

0

ಸುಳ್ಯ ಜೇಸಿಐ ಸಿಟಿ ಇದರ ಆಯೋಜನೆಯಲ್ಲಿ ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆ ಯಲ್ಲಿ ಹಮ್ಮಿಕೊಂಡ ‌ಡೈಮಂಡ್- 2024 ರ ಜೇಸಿಐ ಸಪ್ತಾಹವನ್ನು ಕರಾಟೆ ಶಿಕ್ಷಕ ಜೇಸಿಐ ‌ನಿಕಟ ಪೂರ್ವಾಧ್ಯಕ್ಷ
ಜೇಸಿ ಚಂದ್ರಶೇಖರ ಕನಕಮಜಲು ರವರು ಸೆ.9 ರಂದು ಉದ್ಘಾಟಿಸಿದರು.

ಘಟಕದ ಅಧ್ಯಕ್ಷ ಜೇಸಿ. ವಿಷ್ಣುಪ್ರಕಾಶ್ ನಾರ್ಕೋಡು ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಮ್ಯಾಟ್ರಿಕ್ಸ್ ವಿದ್ಯಾ ಸಂಸ್ಥೆ ಯ ಸಂಚಾಲಕ ಜೇಸಿ ವಿನಯರಾಜ್ ರವರು ಸಪ್ತ ದಿನಗಳ ಕಾಲ ನಡೆಯಲಿರುವ ಸಪ್ತಾಹ ಕ್ಕೆ ಶುಭ ಹಾರೈಸಿದರು. ಘಟಕದ ಸ್ಥಾಪಕರಾದ ಜೇಸಿ. ಮನಮೋಹನ ಬಳ್ಳಡ್ಕ ಪ್ರಾಸ್ತಾವಿಕ ಮಾತನಾಡಿದರು. ಸಪ್ತಾಹ ನಿರ್ದೇಶಕಿ ಜೇಸಿ ಅನಿತಾ ಪಾನತ್ತಿಲ ವಂದಿಸಿದರು. ಮ್ಯಾಟ್ರಿಕ್ಸ್ ವಿದ್ಯಾ ಸಂಸ್ಥೆಯ ಶಿಕ್ಷಕ ವೃಂದದವರು ಹಾಗೂ ‌ವಿದ್ಯಾರ್ಥಿಗಳು ಭಾಗವಹಿಸಿದರು.