ಚೆಂಬು ಪ್ರೌಢ ಶಾಲೆಯನ್ನು ಕೆ.ಪಿ.ಎಸ್. ಮಾದರಿಗೆ ಉನ್ನತೀಕರಣಗೊಳಿಸುವಂತೆ ಮನವಿ

0

ಶಾಲಾಭಿವೃದ್ಧಿ ಸಮಿತಿ ಹಾಗೂ ಊರವರಿಂದ ಕ್ಷೇತ್ರ ಶಿಕ್ಷಣಾದಿಕಾರಿಗಳಿಗೆ ಮನವಿ ಸಲ್ಲಿಕೆ

ಚೆಂಬು ಸರ್ಕಾರಿ ಪ್ರೌಢಶಾಲೆಯನ್ನು ಕೆ.ಪಿ.ಎಸ್. ಮಾದರಿಗೆ ಉನ್ನತೀಕರಿಸುವಂತೆ ಶಾಲಾ ಎಸ್.ಡಿ.ಎಂ.ಸಿ. ಹಾಗೂ ಊರವರು ಸೇರಿ ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಲಾಯಿತು.

ಚೆಂಬು ಸರ್ಕಾರಿ ಪ್ರೌಢಶಾಲೆಯು ಕೆ.ಪಿ.ಎಸ್. ಮಾದರಿ ಶಾಲೆಗೆ ಉನ್ನತೀಕರಣಗೊಂಡಲ್ಲಿ ಇಂಗ್ಲೀಷ್ ಹಾಗೂ ಕನ್ನಡದ ಮಾಧ್ಯಮದ ತರತಿಗಳು ಒಂದೇ ಸೂರಿನಲ್ಲಿ ಊರಿನ ವಿದ್ಯಾರ್ಥಿಗಳಿಗೆ ಲಭಿಸಲಿದೆ.

ಇದರಿಂದ ಗ್ರಾಮದ ವಿದ್ಯಾರ್ಥಿಗಳಿಗೆ ಅತ್ಯಂತ ಅನುಕೂಲಕರವಾಗಿ ಪರಿಣಮಿಸಲಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಸಂದರ್ಭದಲ್ಲಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ರಮೇಶ್ ನಂಬಿಯಾರ್, ಸೂರಜ್ ಹೊಸೂರು, ರವಿರಾಜ್ ಹೊಸೂರು, ಜಯಪ್ರಕಾಶ್ ಪನೇಡ್ಕ, ರೋಹಿತ್ ಪನೇಡ್ಕ, ಯಶ್ವಿನ್ ಬಾಲಂಬಿ, ಉದಯಕುಮಾರ್ ಹೊದ್ದೆಟ್ಟಿ ಉಪಸಿತರಿದ್ದರು.