ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬಹುಮಾನ

0

ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ, ಇಂಡಿಯಾ ಮತ್ತು ಮಂಗಳೂರು ಇಂಡಿಯನ್ ಕರಾಟೆ ಡೋಜೋ ವತಿಯಿಂದ ಮಂಗಳೂರಿನ ಕೋರ್ಡೆಲ್ ಚರ್ಚ್ ಆವರಣದಲ್ಲಿ ಸೆ. 6ರಿಂದ 8ರವರೆಗೆ ನಡೆದ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಸಂಪಾಜೆ ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಇಬ್ಬರು ವಿದ್ಯಾರ್ಥಿಗಳು ಪ್ರಶಸ್ತಿ ಪಡೆದುಕೊಂಡಿದ್ದಾರೆ.


ಕರಾಟೆ ಕಟಾ ಸ್ಪರ್ಧೆಯ 51 ಕೆಜಿ ವಿಭಾಗದಲ್ಲಿ ಪ್ರಣವ್ ಎನ್. ಎಲ್. ನೀರಬಿದಿರೆ ದ್ವಿತೀಯ ಸ್ಥಾನ ಹಾಗೂ 26 ಕೆಜಿ ವಿಭಾಗದಲ್ಲಿ ಕುನಾಲ್ ಎನ್.ಎಲ್. ನೀರಬಿದಿರೆ ತೃತೀಯ ಸ್ಥಾನ ಪಡೆದಿದ್ದಾರೆ.


ಪ್ರಣವ್ ಏಳನೇ ತರಗತಿ ಹಾಗೂ ಕುನಾಲ್ ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.


ಈ ಇಬ್ಬರೂ ಸುಳ್ಯ ಸಾರ್ವಜನಿಕ ಗ್ರಂಥಾಲಯದ ಗ್ರಂಥಪಾಲಕಿ ವಾರಿಜಾ ಎ. ಹಾಗೂ ಲೋಕೇಶ್ ನೀರಬಿದಿರೆ ದಂಪತಿಯ ಮಕ್ಕಳು.
ಕರಾಟೆ ಶಿಕ್ಷಕ ಚಂದ್ರಶೇಖರ ಕನಕ ಮಜಲು ಅವರು ಈ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡಿದ್ದಾರೆ.