ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್‌ನ ಅಧ್ಯಕ್ಷರಾಗಿ ದಿನೇಶ ಶೆಟ್ಟಿ ಅಧಿಕಾರ ಸ್ವೀಕಾರ

0


2024-25 ನೇ ಸಾಲಿನ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್‌ನ ನೂತನ ಅಧ್ಯಕ್ಷರಾಗಿ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ದರ್ಖಾಸ್ತು ಸಂಜೀವ ಶೆಟ್ಟಿ ಮತ್ತು ದಿ. ಶಶಿಕಲಾ ಶೆಟ್ಟಿಯವರ ಪುತ್ರ ಮತ್ತು ಹುಬ್ಬಳ್ಳಿಯ ಗ್ಲೋಬಲ್ ಮೀಡಿಯಾದ ಪಾಲುದಾರ ದಿನೇಶ ಶೆಟ್ಟಿ ಅಧಿಕಾರವನ್ನು ಸ್ವೀಕರಿಸಿದರು. ಇತ್ತೀಚೆಗೆ ಹುಬ್ಬಳ್ಳಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ಡಿಸ್ಟ್ರಿಕ್ಟ್ 3170 ರ ಮಾಜಿ ಗರ್ವನರ್ ರೋ. ಡಾ. ಜಾರಸನ್ ಫೆರ್ನಾಂಡಿಸ್ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು