ಸುಬ್ರಹ್ಮಣ್ಯ :54 ನೇ ವರ್ಷದ ಗಣೇಶೋತ್ಸವ ಸಂಪನ್ನ

0

ಭಕ್ತಸಾಗರ, ಆಕರ್ಷಕ ಸ್ಥಬ್ದಚಿತ್ರ,ಅದ್ದೂರಿ ಶೋಭಾಯಾತ್ರೆ

ಕುಮಾರಧಾರದಲ್ಲಿ ಶ್ರೀ ಗಣೇಶನ ಜಲಸ್ಥಂಭನ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ ವತಿಯಿಂದ ನಡೆದ 54ನೇ ವರ್ಷದ ಗಣೇಶೋತ್ಸವವು ವಿವಿಧ ವೈಧಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.

ಈ ಧಾರ್ಮಿಕ ಕಾರ್ಯಕ್ರಮದ ಶ್ರೀ ಗಣಪತಿ ಶೋಭಾಯಾತ್ರೆ ಮೂಲಕ ಸೆ.13 ಸಂಪನ್ನಗೊಂಡಿತು. ಕುಮಾರಧಾರ ನದಿಯಲ್ಲಿ ಪುರೋಹಿತರು ವೈಧಿಕ ವಿದಿವಿಧಾನಗಳನ್ನು ನೆರವೇರಿಸಿದ ಬಳಿಕ ಶ್ರೀ ದೇವರ ವಿಗ್ರಹವನ್ನು ಜಲಸ್ಥಂಭನಗೊಳಿಸಲಾಯಿತು.

ಸಹಸ್ರಾರು ಭಕ್ತರು ಭಕ್ತಿ ಸಡಗರದಿಂದ ಈ ದೇವತಾ ಕಾರ್ಯದಲ್ಲಿ ಪಾಳ್ಗೊಂಡಿದ್ದರು.ಮೆರವಣಿಗೆಯ ಉದ್ದಕ್ಕೂ ಭಕ್ತಾಧಿಗಳು ಅಲ್ಲಲ್ಲಿ, ಶ್ರೀ ದೇವರಿಗೆ ಹಣ್ಣುಕಾಯಿ ಮಂಗಳಾರತಿ ನೀಡಿದರು.

ಸಪ್ತಾಶ್ವದ ಬೆಳ್ಳಿ ರಥ
ಶ್ರೀ ಗಣಪತಿ ಶೋಭಾಯಾತ್ರೆಯು ಶ್ರೀ ದೇವಳದ ರಥಬೀದಿಯಿಂದ ಸಂಜೆ ಆರಂಭಗೊಂಡಿತು. ಸಪ್ತಾಶ್ವದ ಬೆಳ್ಳಿ ರಥದಲ್ಲಿ ಶ್ರೀ ಗಣಪತಿಯ ಶೋಭಾಯಾತ್ರೆ ನೆರವೇರಿತು. ಕುಮಾರಧಾರದಲ್ಲಿ ಸಮಿತಿ ವತಿಯಿಂದ ಶ್ರೀ ದೇವರ ಪ್ರಸಾದ ರೂಪದಲ್ಲಿ ಶೋಭಾಯಾತ್ರೆಯಲ್ಲಿ ಭಾಗವಹಿಸಿದ ಭಕ್ತರಿಗೆ ಉಪಹಾರ ವಿತರಿಸಲಾಯಿತು. ಅಲ್ಲದೆ ಕುಕ್ಕೆಶ್ರೀ ಅಟೋ ಚಾಲಕ ಮಾಲಕರ ಸಂಘದಿಂದ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಭಕ್ತರಿಗೆ ಪಾನಕ ವ್ಯವಸ್ಥೆ ಮಾಡಲಾಗಿತ್ತು. ಆಕರ್ಷಕ ಸಿಡಿಮದ್ದು ಪ್ರದರ್ಶನ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತ್ತು.

ಆಕರ್ಷಕ ಸ್ತಬ್ಧಚಿತ್ರಗಳು
ಶೋಭಾಯಾತ್ರೆಯಲ್ಲಿ ಹಲವು ಸ್ತಬ್ದಚಿತ್ರಗಳು ಭಾಗವಹಿಸಿ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತು. ಸುಬ್ರಹ್ಮಣ್ಯ ಮಠದಿಂದ ಕದಂಬ ವನದಲ್ಲಿ ಶ್ರೀದೇವಿ, ಕುಕ್ಕೆಶ್ರೀ ಟ್ಯಾಕ್ಸಿ ಚಾಲಕ ಮಾಲಕರ ಸಂಘದಿಂದ ಸುಬ್ರಹ್ಮಣ್ಯ ಮಹಾತ್ಮೆ, ಸುಬ್ರಹ್ಮಣ್ಯದ ಸ್ಕಂಧಶ್ರೀ ಯುವ ಮಲೆಕುಡಿಯರ ಸಂಘದಿಂದ ಭಾಸ್ಕರ್ ಅರ್ಗುಡಿ ನೇತೃತ್ವದಲ್ಲಿ ತಾವರೆಯ ಮೇಲೆ ಕುಳಿತ ಲಕ್ಷ್ಮೀ, ವಿಶ್ವಹಿಂದೂ ಪರಿಷತ್ ಬಜರಂಗ ದಳದಿಂದ, ಕುಕ್ಕೆ ಮೇಟ್ಸ್ ಸುಬ್ರಹ್ಮಣ್ಯ ಸೇರಿದಂತೆ ಇತರ ಸಂಘ ಸಂಸ್ಥೆಗಳಿಂದ ಸ್ತಬ್ದಚಿತ್ರ ರಚಿಸಲಾಗಿತ್ತು.

ಕುಣಿತ ಭಜನೆ
ಶ್ರೀ ಸದಾನಂದ ಆಚಾರ್ಯ ಕಾಣಿಯೂರು ಮಾರ್ಗದರ್ಶನದ ಕುಣಿತ ಭಜನಾ ತಂಡ ಮತ್ತು ಎಬಿವಿಪಿ ಸ್ವಯಂ ಸೇವಕರ ಕುಣಿತ ಭಜನಾ ತಂಡವು ಮೆರವಣಿಗೆಯಲ್ಲಿದ್ದವು. ಹಲವಾರು ಸಾರ್ವಜನಿಕರು ಶ್ರೀ ದೇವರ ಮೆರವಣಿಗೆಯುದ್ದಕ್ಕೂ ಭಜನೆ ನೆರವೇರಿಸಿದರು. ಕಪಿಲ ಚೆಂಡೆ ಬಳಗದಿಂದ ಮತ್ತು ಶರತ್ ಅಮ್ಮಣ್ಣಾಯ ನೇತೃತ್ವದಲ್ಲಿ ಸಿಂಗಾರಿ ಮೇಳವು ಶೋಭಾಯಾತ್ರೆಯ ಆಕರ್ಷಣೆಯಾಗಿತ್ತು. ಕುಕ್ಕೆಮೇಟ್ಸ್ ತಂಡದಿಂದ ಆಯೋಜಿಸಲ್ಪಟ್ಟ ಡಿಜೆ ಮೇಳ, ನಾಸಿಕ್ ಬ್ಯಾಂಡ್ ಮೇಳವೂ ಮೆರವಣಿಗೆಯಲ್ಲಿತ್ತು.

ಸುಬ್ರಹ್ಮಣ್ಯ ಪೊಲೀಸರಿಂದ ಬಂದೋಬಸ್ತು:
ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್.ಕೆ ನೇತೃತ್ವದಲ್ಲಿ ಶಾಂತಿ ಸುವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಸುಬ್ರಹ್ಮಣ್ಯ ಪೋಲೀಸರು ಮಾಡಿದರು. ನಿರಂತರ ೬ ಗಂಟೆಗಳ ಕಾಲ ಮೆರವಣಿಗೆಯುದ್ದಕ್ಕೂ ಉಪಸ್ಥಿತರಿದ್ದರು.
ಈ ಸಂದರ್ಭ ಸಮಿತಿಯ ಅಧ್ಯಕ್ಷ ದಿನೇಶ್ ಮೊಗ್ರ, ಸಂಚಾಲಕರಾದ ಎ.ವೆಂಕಟ್ರಾಜ್, ಕೆ.ಯಜ್ಞೇಶ್ ಆಚಾರ್, ರಾಜೇಶ್.ಎನ್.ಎಸ್, ನಿಕಟಪೂರ್ವಾಧ್ಯಕ್ಷ ದಿನೇಶ್ ಸಂಪ್ಯಾಡಿ, ಪ್ರಧಾನ ಕಾರ್ಯದರ್ಶಿ ರತ್ನಾಕರ ಸುಬ್ರಹ್ಮಣ್ಯ,ಕಾರ್ಯದರ್ಶಿ ದೀಪಕ್ ನಂಬಿಯಾರ್, ಉಪಾಧ್ಯಕ್ಷರಾದ ಯಶೋಧಕೃಷ್ಣ ನೂಚಿಲ, ವಿನ್ಯಾಸ್ ಹೊಸೋಳಿಕೆ, ಭರತ್ ನೆಕ್ರಾಜೆ, ನಿತಿನ್ ಭಟ್, ಮಹೇಶ್ ಗುಡ್ಡೆಮನೆ, ಭಾರತಿ ದಿನೇಶ್, ಪ್ರಧಾನ ಕೋಶಾಧಿಕಾರಿ ಶ್ರೀಕೃಷ್ಣ ಶರ್ಮ, ಕೋಶಾಧಿಕಾರಿ ಹರಿಪ್ರಸಾದ್ ನಾಯರ್ ಮಲ್ಲಾಜೆ, ಜತೆ ಕಾರ್ಯದರ್ಶಿಗಳಾದ ಮನೋಜ್ ಕುಮಾರ್.ಎಸ್, ಜಯರಾಮ ಎಚ್.ಎಲ್, ಸಹಕೋಶಾಧಿಕಾರಿಗಳಾದ ಅಚ್ಚುತ್ತ ಗೌಡ, ಶ್ರೀಕುಮಾರ್ ಬಿಲದ್ವಾರ, ಸುಹಾಸ್ ಎಚ್.ಎಸ್, ದೇವಿ ಚರಣ್ ಕಾನಡ್ಕ, ಲೋಕೇಶ್ ಬಿ.ಎನ್ ಸೇರಿದಂತೆ ಸಮಿತಿ ಪದಾಧಿಕಾರಿಗಳು ಮತ್ತು ಸಹಸ್ರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.