ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮೊಗರ್ಪಣೆ ಜುಮಾ ಮಸೀದಿಗೆ ಭೇಟಿ

0

ವಿಧಾನ ಪರಿಷತ್ ಸದಸ್ಯರು ಕಾಂಗ್ರೆಸ್ ನ ಹಿರಿಯ ಮುಖಂಡರು ಆದ ಐವನ್ ಡಿಸೋಜ ರವರು ಸೆ. 16 ರಂದು ಮೊಗರ್ಪಣೆ ಜುಮಾ ಮಸೀದಿಗೆ ಭೇಟಿ ನೀಡಿದರು.

ಈ ಸಂಧರ್ಭದಲ್ಲಿ ಮಸೀದಿ ಆಡಳಿತ ಸಮಿತಿ ವತಿಯಿಂದ ಮಿಲಾದ್ ಕಾರ್ಯಕ್ರಮದ ವೇದಿಕೆಯಲ್ಲಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಅವರು ಮದರಸ ವಿದ್ಯಾರ್ಥಿಗಳು ಪುಟ್ಟ ಮಕ್ಕಳು ಮಿಲಾದ್ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದು ಕೊಳ್ಳುವುದು ನೋಡಿದಾಗ ಸಂತೋಷ ವಾಗುತ್ತದೆ. ಈ ಪ್ರಾಯದಲ್ಲಿಯೇ ಮಕ್ಕಳಿಗೆ ಆಯೋಜಕರು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಅವರಲ್ಲಿರುವ ಭಯವನ್ನು ದೂರ ಮಾಡುವ ಕಾರ್ಯ ಶ್ಲಾಘನೀಯ ಎಂದು ಈದ್ ಮಿಲಾದ್ ಶುಭಾಶಯಗಳನ್ನು ಕೋರಿದರು.

ಕೆ ಪಿ ಸಿ ಸಿ ಸದಸ್ಯ ಡಾ. ರಘು ಉಪಸ್ಥಿತರಿದ್ದರು. ಕಾಂಗ್ರೆಸ್ ಮುಖಂಡ ಜಮಾಅತ್ ಕಮಿಟಿ ಸದಸ್ಯ ಎಸ್ ಸಂಶುದ್ದೀನ್ ಅರಂಬೂರು ಗಣ್ಯರನ್ನು ಸ್ವಾಗತಿಸಿ ಸರಕಾರದ ಅನುದಾನದಿಂದ ಮಸೀದಿ ಮತ್ತು ಮದರಸಗಳಿಗೆ ಹೈ ಮಾಕ್ಸ್ ದೀಪ ಅಳವಡಿಸಿ ಕೊಡುವ ಕುರಿತು ಮನವಿ ಮಾಡಿದರು.

ವೇದಿಕೆಯಲ್ಲಿ ಸ್ಥಳೀಯ ಮಸೀದಿ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಖಾಫಿ ಎಚ್ ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್, ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಉಪಾಧ್ಯಕ್ಷ ಸಿ ಎಂ ಉಸ್ಮಾನ್,ಸದಸ್ಯರುಗಳಾದ ಜಿ ಕೆ ರಝಕ್, ಅಬ್ದುಲ್ ಖಾದರ್ ಶಾಂತಿನಗರ,ಹಿರಿಯರಾದ ಹಾಜಿ ಪಳ್ಳಿ ಕುಂಞಿ ಮಿಲಾದ್ ಸ್ವಾಗತ ಸಮಿತಿ ಅಧ್ಯಕ್ಷ ರಶೀದ್ ಕೆ ವಿ ಜಿ ಮದರಸ ಅಧ್ಯಾಯಪಕ ವೃಂದ ಮೊದಲಾದವರು ಉಪಸ್ಥಿತರಿದ್ದರು.