ರೂ.47 ಲಕ್ಷ ಲಾಭ, ಶೇ.7 ಡಿವಿಡೆಂಡ್
ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸೆ.16 ರಂದು ಶ್ರೀ ನರಸಿಂಹ ಶಾಸ್ತಾವು ದೇವಾಲಯದ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ ಅಧ್ಯಕ್ಷತೆ ವಹಿಸಿದ್ದರು.
ಸಂಘವು ರೂ 47 ಲಕ್ಷ ರೂ ಲಾಭವನ್ನು ಹೊಂದಿದ್ದು, ಸದಸ್ಯರಿಗೆ ಶೇ. 7 ಡಿವಿಡೆಂಡ್ ನೀಡಲಾಯಿತು.
ಸ.ಹಿ.ಪ್ರಾ ಶಾಲೆ ಉಬರಡ್ಕ ಮಿತ್ತೂರು, ಸ.ಹಿ.ಪ್ರಾ ಶಾಲೆ ಅಮೈಮಡಿಯಾರು ಹಾಗೂ ಕೊಡಿಯಾಲಬೈಲು ಕಿರಿಯ ಪ್ರಾಥಮಿಕ ಶಾಲೆಯ ತಲಾ 2 ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮರಣ ಸಾಂತ್ವನ ನಿಧಿಗೆ ಪೋಷಕರಾಗಿ ರೂ. ಐವತ್ತು ಸಾವಿರ ನೀಡಿದ ವಿಘ್ನೇಶ್ವರ ಭಟ್ ನೆಕ್ಕಿಲ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ರಾಜೇಶ್ ಭಟ್ ನೆಕ್ಕಿಲ, ನಿರ್ದೇಶಕರುಗಳಾದ ಪಿ.ಎಸ್ ಗಂಗಾಧರ್, ಯು.ವಿ ಭಾಸ್ಕರ ರಾವ್, ಸುರೇಶ ಎಂ.ಎಚ್, ಹರಿಪ್ರಸಾದ್ ಪಾನತ್ತಿಲ, ವಿಜಯಕುಮಾರ್ ಉಬರಡ್ಕ, ಜಗದೀಶ ಕಕ್ಕೆಬೆಟ್ಟು, ಹರೀಶ್ ಮಾಣಿಬೆಟ್ಟು, ಈಶ್ವರ ಕಲ್ಚಾರು, ಶ್ರೀಮತಿ ಶಾರದಾ ಡಿ ಶೆಟ್ಟಿ, ಶ್ರೀಮತಿ ಲೀಲಾವತಿ ಬಳ್ಳಡ್ಕ, ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಪಿ. ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ ವಾರ್ಷಿಕ ವರದಿ ವಾಚಿಸಿದರು.
ಸಂಘದ ಉಪಾಧ್ಯಕ್ಷ ರಾಜೇಶ್ ಭಟ್ ನೆಕ್ಕಿಲ ದನ್ಯವಾದ ಸಮರ್ಪಿಸಿದರು. ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್ ಪಡ್ಪು, ಸಿಬ್ಬಂದಿ ಶ್ರೀಮತಿ ರಮ್ಯ ಮತ್ತು ಗುರುವ ಸಹಕರಿಸಿದರು.
ನಂತರ ಆಯುಷ್ ಆಯುರ್ವೇದ ವೆಲ್ ನೆಸ್ ವತಿಯಿಂದ ಕೃಷಿ ಮಾಹಿತಿ ಕಾರ್ಯಾಗಾರ ನಡೆಯಿತು.