ಎಣ್ಮೂರು ಇತಿಹಾಸ ಪ್ರಸಿದ್ಧ ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಗರಡಿಯಲ್ಲಿ ಜ.೧೪ರಂದು ಮಕರ ಸಂಕ್ರಾಂತಿ ದಿನದಂದು ಸಂಕ್ರಮಣ ಪೂಜೆ, ತಂಬಿಲ ಸೇವೆ, ಪ್ರಸಾದ ವಿತರಣೆ ನಡೆಯಿತು. ಏಪ್ರಿಲ್ ೯ರಂದು ಉಲ್ಲಾಕುಲ ನೇಮ ಮತ್ತು ಕಾಜು ಕುಜುಂಬ ನೇಮ, ೧೦ ರಿಂದ ಇಷ್ಟ ದೇವತೆ ನೇಮ, ಏಪ್ರಿಲ್ ೧೧ ರಂದು ಆದಿ ಬೈದರು ಕೋಟಿ ಚೆನ್ನಯ ನೇಮೋತ್ಸವ ನಡೆಯಲಿರುವ ಪ್ರಯುಕ್ತ ಯಶಸ್ವಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಮತಿ ಪದ್ಮ ಆರ್ ಶೆಟ್ಟಿ, ಶ್ರೀಮತಿ ಮಂಜುಳಾ ಶೆಟ್ಟಿ, ಚಿಕ್ಕ ರಾಜೇಂದ್ರ ಶೆಟ್ಟಿ, ಶ್ರೀಮತಿ ಶರ್ಮಿಳ ಅತುಲ್ ಶೆಟ್ಟಿ, ಅಶೋಕ್ ಕುಮಾರ್ ರೈ ಕಟ್ಟಬೀಡು, ರಘುನಾಥ್ ರೈ ಕೆಎನ್, ನ್ಯಾಯವಾದಿ ರಾಧಾಕೃಷ್ಣ ರೈ, ಭಾಸ್ಕರ ರೈ ಕಟ್ಟ ಬೀಡು, ನಾಗೇಶ್ ಆಳ್ವ ಕಟ್ಟಬೀಡು, ಸುಧೀರ್ ಕುಮಾರ್ ಶೆಟ್ಟಿ ಕಟ್ಟಬೀಡು, ಅನಿಲ್ ರೈ ಕಟ್ಟಬೀಡು, ಎನ್ ಜಿ ಲೋಕನಾಥ್ ರೈ ಎಣ್ಮೂರು, ರಘುಪ್ರಸಾದ್ ಶೆಟ್ಟಿ ಎಣ್ಮೂರು ಗುತ್ತು, ಗಿರಿ ಪ್ರಸಾದ್ ರೈ ಕಟ್ಟಬೀಡು ಜಗನ್ನಾಥ ರೈ ಕುಲೈತೋಡಿ ಇನ್ನಿತರ ಉಪಸ್ಥಿತರಿದ್ದರು.
ವರದಿ: ಎ. ಎಸ್. ಸಾಲಿಯಾನ್