ಸೋಣಂಗೇರಿ ಶಾಲೆಯಲ್ಲಿ ಹಲ್ಲಿನ ಸುರಕ್ಷತೆ ಬಗ್ಗೆ ಮಾಹಿತಿ ಕಾರ್ಯಾಗಾರ

0

ಮಕ್ಕಳಿಗೆ ಟೂತ್‌ಪೇಸ್ಟ್ ಮತ್ತು ಟೂತ್ ಬ್ರಶ್ ವಿತರಣೆ

ಬ್ಯಾಂಕ್ ಆಫ್ ಬರೋಡಾ, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ), ಮಂಗಳೂರು, ವಿಜಯ ಗ್ರಾಮಾಭಿವೃದ್ಧಿ ಸಮಿತಿ, ಜಾಲ್ಸೂರು
ಇದರ ಆಶ್ರಯದಲ್ಲಿ ಹಲ್ಲಿನ ಸುರಕ್ಷತೆ ಬಗ್ಗೆ ಮಾಹಿತಿ ಕಾರ್ಯಾಗಾರ, ಮಕ್ಕಳಿಗೆ ಟೂತ್‌ಪೇಸ್ಟ್ ಮತ್ತು ಟೂತ್ ಬ್ರಶ್ ವಿತರಣಾ ಕಾರ್ಯಕ್ರಮ ನ. 28 ರಂದು
ಸ.ಉ.ಹಿ.ಪ್ರಾ.ಶಾಲೆ ಸೋಣಂಗೇರಿಯಲ್ಲಿ ನಡೆಯಿತು.

ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಸಿಇಓ ವಿಶ್ವನಾಥ್ ರೈ ಕಾರ್‍ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.

ಜಾಲ್ಸೂರಿನ ಸೈಲ್ ವಿಜ್ ದಂತ ಚಿಕಿತ್ಸಾಲಯದ ಡಾ. ಸಂದೀಪ್ ಬಿ.ಎಸ್ ಹಲ್ಲಿನ ಸುರಕ್ಷತೆ ಬಗ್ಗೆ ಮಾಹಿತಿ ಕಾರ್‍ಯಕ್ರಮ ನಡೆಸಿಕೊಟ್ಟರು.

ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು ಇದರ ಅಧ್ಯಕ್ಷ ಯಶ್ವಿತ್ ಕಾಳಂಮನೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬ್ಯಾಂಕ್ ಆಫ್ ಬರೋಡ ಸುಳ್ಯ
ಶಾಖಾ ವ್ಯವಸ್ಥಾಪಕ ವಿಜಯ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಚಿದಾನಂದ, ವಿಜಯ ಗ್ರಾಮಾಭಿವೃದ್ಧಿ ಸಮಿತಿ
ಕಾರ್‍ಯದರ್ಶಿ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ ಮಾತನಾಡಿ ಶುಭ ಹಾರೈಸಿದರು.

ಕಾರ್ಯಕ್ರಮ ಸಂಯೋಜಕರಾದ ಪ್ರಭಾಕರ ರೈ, ಸತೀಶ್ ಕೊಮ್ಮೆಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಸಹ ಶಿಕ್ಷಕಿ ಶ್ರೀಮತಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ನಾಯಕ ರಕ್ಷಿತ್ ಪ್ರಾರ್ಥಿಸಿದರು.ಶಿಕ್ಷಕಿ ಜಯಲಕ್ಷ್ಮಿ ಸ್ವಾಗತಿಸಿದರು.

ಅಂಗನವಾಡಿ ಹಾಗೂ ಶಾಲೆಯ ಎಲ್ಲಾ ಮಕ್ಕಳಿಗೆ ಸಮಿತಿಯ ವತಿಯಿಂದ ಟೂತ್‌ಪೇಸ್ಟ್ ಮತ್ತು ಟೂತ್ ಬ್ರಶ್ ವಿತರಿಸಲಾಯಿತು.

ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ವಿಜಯ ಗ್ರಾಮಾಭಿವೃದ್ಧಿ ಸಮಿತಿಯ ಸದಸ್ಯರು,ಅಡುಗೆ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.