ಕ್ಷಯರೋಗದ ಜಾಗೃತಿ ಮೂಡಿಸುವ ಕಿರುಚಿತ್ರ ಆರೋಗ್ಯ ಸಚಿವರಿಂದ ಮಂಗಳೂರಿನಲ್ಲಿ ಬಿಡುಗಡೆ

0

ಸುಳ್ಯ ತಾಲೂಕು ಆರೋಗ್ಯ ಇಲಾಖೆಯ ಕ್ಷಯ ವಿಭಾಗದಿಂದ ನಿರ್ಮಾಣ


ಸುಳ್ಯ ತಾಲೂಕು ಆರೋಗ್ಯ ಇಲಾಖೆಯ ಕ್ಷಯ ವಿಭಾಗದಿಂದ
ಕ್ಷಯ ರೋಗದ ಕುರಿತು ಜಾಗೃತಿ ಮೂಡಿಸುವ ಕಿರು ಚಿತ್ರವನ್ನು ನಿರ್ಮಿಸಿದ್ದು, ಈ ಕಿರುಚಿತ್ರವನ್ನು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ರವರು ಮಂಗಳೂರಿನಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿದರು.


ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತಿಮ್ಮಯ್ಯ, ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರರಾದ ಡಾ. ಜೋಯ್ ಜೋಸ್ ಥಾಮಸ್, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ ಭಂಡಾರಿ, ಸುಳ್ಯ ಕ್ಷಯ ಚಿಕಿತ್ಸಾ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ ಲೋಕೇಶ್ ತಂಟೆಪ್ಪಾಡಿ, ಮಂಗಳೂರು ಜಿಲ್ಲಾ ಕ್ಷಯ ಚಿಕಿತ್ಸಾ ಕೇಂದ್ರದ ಪಿಪಿಎಂ ಸಂಯೋಜಕ ಮನೋಜ್, ಬಂಟ್ವಾಳ ಕ್ಷಯ ಚಿಕಿತ್ಸಾ ಘಟಕದ ಹಿರಿಯ ಪ್ರಯೋಗ ಶಾಲಾ ಮೇಲ್ವಿಚಾರಕ ಡೊಮೆನಿಕ್ ಡೇವಿಡ್ ಡಿಸೋಜ ಮತ್ತು ವಿವಿಧ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.


ಈ ಕ್ಷಯರೋಗ ಕಿರು ಚಿತ್ರವನ್ನು ಸುಳ್ಯ ಕ್ಷಯ ಚಿಕಿತ್ಸಾ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ ಲೋಕೇಶ್ ತಂಟೆಪ್ಪಾಡಿ ನಿರ್ದೇಶಿಸಿದ್ದು ಮುಮ್ಮೇಳದಲ್ಲಿ ಪ್ರೌಢಶಾಲಾ ಶಿಕ್ಷಕ ಲಿಂಗಪ್ಪ ಬೆಳ್ಳಾರೆ ಅಭಿನಯಿಸಿದ್ದಾರೆ, ಹಿಮ್ಮೇಳದಲ್ಲಿ ಭಾಗವತರಾಗಿ ಶಶಾಂಕ ಬಿಳಿಮಲೆ, ಚೆಂಡೆಯಲ್ಲಿ ಬಾಲಸುಬ್ರಹ್ಮಣ್ಯ ಭಟ್ ಗುತ್ತಿಗಾರು, ಮದ್ದಳೆಯಲ್ಲಿ ಗಿರೀಶ್ಉಬರಡ್ಕ ನಿರ್ವಹಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಡಾ. ಜೋಯ್ ಜೋಸ್ ಥಾಮಸ್ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್ ಸಹಕಾರ ನೀಡಿದ್ದಾರೆ. ಈ ಯಕ್ಷಗಾನವನ್ನು ಸುಳ್ಯ ಸುದ್ದಿ ಚಾನೆಲ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ