ಬಡ್ಡಡ್ಕ ಅಂಗನವಾಡಿ ಕೇಂದ್ರಕ್ಕೆ ಉದ್ಯಮಿ ರೊ.ವಾಸುದೇವ ಗೌಡ ಮಡಂತ್ಯಾರು ರವರಿಂದ ಕಲಿಕೋಪಕರಣದ ಕೊಡುಗೆ

0

ಆಲೆಟ್ಟಿ ಗ್ರಾಮದ ಬಡ್ಡಡ್ಕ ಅಂಗನವಾಡಿ ಕೇಂದ್ರಕ್ಕೆ ರೋಟರಿ ಕ್ಲಬ್ ಮಡಂತ್ಯಾರು ಇದರ ವತಿಯಿಂದ ಮಕ್ಕಳ ಕಲಿಕೆಗೆ ಪೂರಕವಾದ ಉಪಕರಣಗಳನ್ನು ಕೊಡುಗೆಯಾಗಿ ಸೆ.19 ರಂದು ವಿತರಿಸಲಾಯಿತು. ಮಡಂತ್ಯಾರು ರೋಟರಿ ಕ್ಲಬ್ ಅಧ್ಯಕ್ಷ ರೊ.ನಿತ್ಯಾನಂದ ಅಧ್ಯಕ್ಷತೆ ವಹಿಸಿದ್ದರು.
ಆಲೆಟ್ಟಿ ಗ್ರಾಮದ ಬಡ್ಡಡ್ಕದಲ್ಲಿ ಜನಿಸಿ ವಿದ್ಯಾಭ್ಯಾಸ ಪೂರೈಸಿ ಬಳಿಕ ಅಕ್ಷಯ ಫುಡ್ಸ್ ಎಂಬ ಹೆಸರಿನ ಸ್ವಂತ ಉದ್ಯಮವನ್ನು ಮಡಂತ್ಯಾರಿನಲ್ಲಿ ಪ್ರಾರಂಭಿಸಿ ಉದ್ಯಮಿಯಾಗಿ ಗುರುತಿಸಿಕೊಂಡಿರುವ ರೋಟರಿ ಕ್ಲಬ್ ಸದಸ್ಯ
ರೊ.ವಾಸುದೇವ ಗೌಡ ಮತ್ತು ಶ್ರೀಮತಿ ವೇದಾವತಿ ವಾಸುದೇವ ಗೌಡ ರವರು ಮಕ್ಕಳಿಗೆ ಅವಶ್ಯಕವಿರುವ ಸುಮಾರು 25 ಚೆಯರ್ ಮತ್ತು ಟೇಬಲ್ ಹಾಗೂ ಕಲಿಕೋಪಕರಣವನ್ನು ಉಚಿತವಾಗಿ ನೀಡಿದರು.

ಈ ಸಂದರ್ಭದಲ್ಲಿ ಆಲೆಟ್ಟಿ ಪಂಚಾಯತ್ ಸದಸ್ಯ ಸತ್ಯಕುಮಾರ್ ಆಡಿಂಜ, ಸಿ.ಡಿ.ಪಿ.ಒ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ದೀಪಿಕಾ, ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ಕೊಯಿಂಗಾಜೆ, ಕ್ಲಬ್ ಕಾರ್ಯದರ್ಶಿ ರೊ.ತುಳಸೀದಾಸ್ ಪೈ ವೇದಿಕೆಯಲ್ಲಿದ್ದರು. ಮಡಂತ್ಯಾರು ರೋಟರಿ ಕ್ಲಬ್ ಸದಸ್ಯರಾದ ರೊ.ಕಾಂತಪ್ಪ ಗೌಡ, ರೊ.ರಮೇಶ್ ಮೂಲ್ಯ, ರೊ.ಮ್ಯಾಕ್ಸಿಮ್‌ ಅಲ್ಬುಕರ್ಕ್,ರೊ.ನಾರಾಯಣ ಶೆಟ್ಟಿ, ರೊ.ವಚನ್ ನಿತ್ಯಾನಂದ,ರೊ.ಭವಾನಿ ಕಾಂತಪ್ಪ ಗೌಡ ಹಾಗೂ ಸ್ಥಳೀಯರಾದ ವಾಸುದೇವ ರವರ ಸಹೋದರ ಚಂದ್ರಶೇಖರ ಗೌಡ ಬಡ್ಡಡ್ಕ, ಶ್ರೀಮತಿ ಅನಿತಾ,ಪಂ ಮಾಜಿ ಸದಸ್ಯ ಹೇಮನಾಥ ಗೌಡ ಬಡ್ಡಡ್ಕ ರವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉದ್ಯಮಿರೊ.ವಾಸುದೇವ ಗೌಡ ರವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಶಿಕ್ಷಕಿ ನವ್ಯ ರವರು ಪ್ರಾರ್ಥಿಸಿದರು. ರೊ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ರೊ.ತುಳಸೀದಾಸ್ ಪೈ ವಂದಿಸಿದರು. ಸನತ್ ಬಡ್ಡಡ್ಕ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಸ್ತ್ರೀ ಶಕ್ತಿ ಸಂಘದ ಸದಸ್ಯರು ಹಾಗೂ ಪೋಷಕರು ,ವಿದ್ಯಾರ್ಥಿಗಳು ಭಾಗವಹಿಸಿದರು.