ಸುಳ್ಯ ತಾಲೂಕು ಮಿಲಾದ್ ಕಾಲ್ನಡಿಗೆ ಜಾಥಾ ಕಾರ್ಯಕ್ರಮದ ಪ್ರಚಾರ ವಾಹನಕ್ಕೆ ಚಾಲನೆ

0

ಸುಳ್ಯ ತಾಲೂಕು ಮೀಲಾದ್ ಸಮಿತಿ ವತಿಯಿಂದ ನಾಳೆ ನಡೆಯುವ ಮೀಲಾದ್ ಕಾರ್ಯಕ್ರಮದ ಪ್ರಚಾರ ವಾಹನಕ್ಕೆ ಮೊಗರ್ಪಣೆಯಲ್ಲಿ ಚಾಲನೆ ನೀಡಲಾಯಿತು.
ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್ ಧ್ವಜ ಹಸ್ತಾಂತರಿಸಿ ಚಾಲನೆಯನ್ನು ನೀಡಿದರು.

ಈ ಸಂಧರ್ಭದಲ್ಲಿ ಮದರಸ ಮುಅಲ್ಲಿಮ್ ನಾಸಿರ್ ಸಖಾಫಿ,ಸುಳ್ಯ ತಾಲೂಕು ಮಿಲಾದ್ ಸಮಿತಿಯ ಉಪಾಧ್ಯಕ್ಷರುಗಳಾದ ಸಿದ್ದೀಕ್ ಕೊಕ್ಕೊ,ಜುನೈದ್ ಎನ್ ಎ, ಕಾರ್ಯದರ್ಶಿ ಉನೈಸ್ ಪೆರಾಜೆ,ನವಾಜ್ ಪಂಡಿತ್, ಮುಖಂಡರಾದ ಜಬ್ಬಾರ್ ಲ್ಯಾಂಡ್ ಲಿಂಕ್ಸ್ ಮೊದಲಾದವರು ಉಪಸ್ಥಿತರಿದ್ದರು.