ಸುಳ್ಯ ತಾ. ಗೌಡ ಮಹಿಳಾ ಘಟಕದಿಂದ ದೀಪಾವಳಿ ಹಬ್ಬದ ಪ್ರಯುಕ್ತ ತಾಲೂಕು ಮಟ್ಟದ ಬಲೀಂದ್ರ ಅಲಂಕಾರ ಸ್ಪರ್ಧೆ

0

ಸುಳ್ಯ ತಾಲೂಕು ಗೌಡ ಮಹಿಳಾ ಘಟಕದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಸುಳ್ಯ ತಾಲೂಕು ಮಟ್ಟದ ಬಲೀಂದ್ರ ಅಲಂಕಾರ ಸ್ಪರ್ಧೆ ನಡೆಯಲಿದ್ದು ಸಮಾಜ ಬಾಂಧವರು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಗೌಡ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಿನುತಾ ಹರೀಶ್ಚಂದ್ರ ಪಾತಿಕಲ್ಲು ತಿಳಿಸಿದ್ದಾರೆ.
ಸೆ.೨೦ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಗೌಡ ಮಹಿಳಾ ಘಟಕ ಸುಳ್ಯ ತಾಲೂಕು ಗೌಡ ಸಮಾಜದ ಆಚಾರ – ವಿಚಾರ, ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗೌಡ ಸಮಾಜದವರಿಗಾಗಿ ಬಲೀಂದ್ರ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸುಳ್ಯ ತಾಲೂಕು ಸೇರಿದಂತೆ, ಸುಬ್ರಹ್ಮಣ್ಯ, ಬಳ್ಪ, ಯೇನೆಕಲ್ಲು, ಪೆರಾಜೆ, ಕೊಡಗು ಸಂಪಾಜೆ, ಚೆಂಬು, ಬಂದ್ಯಡ್ಕ, ಕಲ್ಲಪಳ್ಳಿ, ಬೆಳ್ಳಿಪ್ಪಾಡಿ ಹೀಗೆ ಗೌಡ ಸಮಾಜ ವ್ಯಾಪ್ತಿಯವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಮೂಲ ಸಂಪ್ರದಾಯಗಳನ್ನು ಉಳಿಸಿಕೊಂಡು ನೈಸರ್ಗಿಕವಾದ ಅಲಂಕಾರಗಳಿಗೆ ಪ್ರಾಧಾನ್ಯತೆ ನೀಡಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವವರು ಅಕ್ಟೋಬರ್ ೨೨ ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಬಹುದು. ಸ್ಪರ್ಧೆಯ ವಿಜೇತರಿಗೆ ಪ್ರಥಮ ರೂ.5 ಸಾವಿರ, ದ್ವಿತೀಯ ರೂ.3 ಸಾವಿರ ಹಾಗೂ ತೃತೀಯ ರೂ. 2 ಸಾವಿರ ಹಾಗೂ ಶಾಶ್ವತ ಫಲಕ ಹಾಗೂ ೫ ಆಕರ್ಷಕ ಬಹುಮಾನ ನೀಡಲಾಗುವುದು.

ಗೌಡ ಸಮಾಜದ ವತಿಯಿಂದ ನಡೆಯುವ ದೀಪಾವಳಿ ಆಚರಣೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂಧಾವಣೆಗಾಗಿ ಪತ್ರಿಕಾಗೋಷ್ಠಿಯಲ್ಲಿದ್ದ ಗೌಡ ಮಹಿಳಾ ಘಟಕ ಅಧ್ಯಕ್ಷೆ ವಿನುತಾ ಪಾತಿಕಲ್ಲು – 8496866368, ಪ್ರಧಾನ ಕಾರ್ಯದರ್ಶಿ ಸವಿತಾ ಸಂದೇಶ್ – 9480534929, ಕೋಶಾಧಿಕಾರಿ ಜಯಶ್ರೀ ರಾಮಚಂದ್ರ – 9481023779, ಗೌರವಾಧ್ಯಕ್ಷೆ ಶ್ರೀಮತಿ ಪುಷ್ಪಾ ರಾಧಾಕೃಷ್ಣ 9880669998, ಶ್ರೀಮತಿ ಮೀನಾಕ್ಷಿ ಸುಂದರ ರಾಮಕಜೆ – 8105878335, ಶ್ರೀಮತಿ ತಾರಾ ಮಾಧವ ಗೌಡ ಬೆಳ್ಳಾರೆ 9901770912 ರವರಿಂದ ಮಾಹಿತಿ ಪಡೆಯಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ತರುಣ ಘಟಕದ ಅಧ್ಯಕ್ಷ ಪ್ರೀತಮ್ ಡಿ.ಕೆ, ಹೇಮಾ ದೇಂಗೋಡಿ ಇದ್ದರು.