ಶ್ರೀಮತಿ ಎಲ್ಯಕ್ಕ ಸಂಕಡ್ಕ ನಿಧನ

0

ಐವತ್ತೊಕ್ಲು ಗ್ರಾಮದ ಸಂಕಡ್ಕ ಎಲ್ಯಕ್ಕ(ಸಣ್ಣಕ್ಕ) ರವರು ಅಲ್ಪ ಕಾಲದ ಅಸೌಖ್ಯದಿಂದ ಸೆ.20 ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 85 ವರುಷ ವಯಸ್ಸಾಗಿತ್ತು.

ಅವರು ಹಿಂದೆ ಸುದ್ದಿ ಬಿಡುಗಡೆ ಪತ್ರಿಕೆಯ ಜಾಹೀರಾತು ವಿಭಾಗದ ಮುಖ್ಯಸ್ಥರಾಗಿದ್ದ ದಿವಂಗತ ಜಯಂತ ಸಂಕಡ್ಕ ರವರ ತಾಯಿ.

ಮೃತರು ಪುತ್ರರಾದ ಚೆನ್ನಪ್ಪ ಗೌಡ, ಬಾಲಪ್ಪ ಗೌಡ , ಪುತ್ರಿಯರಾದ ಶ್ರೀಮತಿ ಜಾನಕಿ, ಶ್ರೀಮತಿ ಶೇಷವೇಣಿ, ಶ್ರೀಮತಿ ಭವಾನಿ, ಶ್ರೀಮತಿ ಪದ್ಮಾವತಿ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.