ಮುಳ್ಯ ಅಟ್ಲೂರು ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಮಾಸಾಚರಣೆ

0

ಮುಳ್ಯ ಅಟ್ಲೂರು ಅಂಗನವಾಡಿ ಕೇಂದ್ರದಲ್ಲಿ ಸೆ.21 ರಂದು ಪೌಷ್ಟಿಕ ಸಪ್ತಾಹ ಕಾರ್ಯಕ್ರಮವು ನಡೆಯಿತು.
ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ರಮ್ಯಾ ಹೆಚ್, ಸದಸ್ಯರುಗಳಾದ ಆನಂದ ಕೆ ಕೆ, ಶ್ರೀಮತಿ ರೂಪ, ಶ್ರೀಮತಿ ನಳಿನಾಕ್ಷಿ, ಹಿರಿಯ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅಲಕ ನಂದಿನಿ ಹಾಗೂ ಪೋಷಕರು ಉಪಸ್ಥಿತರಿದ್ದರು.

ಸಮುದಾಯ ಆರೋಗ್ಯ ಸುರಕ್ಷಾ ಅಧಿಕಾರಿಯದ ಶ್ರೀಮತಿ ಮಾಲಿನಿ ಇವರು ಪೌಷ್ಟಿಕ ಆಹಾರಗಳ ಬಗ್ಗೆ ಮಾಹಿತಿ ನೀಡಿದರು.

ಶ್ರೀಮತಿ ಸ್ವರ್ಣಗೌರಿ ಪ್ರಾರ್ಥಿಸಿದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಹೇಮಮಾಲಿನಿ ನಿರೂಪಿಸಿದರು. ಅಂಗನವಾಡಿ ಸಹಾಯಕಿ ಶ್ರೀಮತಿ ಯಶೋಧ ವಂದಿಸಿದರು.