ಸ್ಕ್ಯಾಡ್ಸ್ ಸಂಸ್ಥೆಯ ವತಿಯಿಂದ ಆಲೆಟ್ಟಿ ಸಹಕಾರಿ ಸಂಘಕ್ಕೆ ಪ್ರಶಸ್ತಿ

0

ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘದ (ಸ್ಕ್ಯಾಡ್ಸ್) ವಾರ್ಷಿಕ ಮಹಾಸಭೆಯಲ್ಲಿ 2023-24 ನೇ ಸಾಲಿನಲ್ಲಿ ಅತ್ಯಧಿಕ ಮೌಲ್ಯದ ಕೃಷಿ ಯಂತ್ರೋಪಕರಣ ಹಾಗೂ ಬಿಡಿಭಾಗಗಳನ್ನು ಖರೀದಿಸಿರುವ ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಪ್ರಥಮ ಸ್ಥಾನದ ಪ್ರಶಸ್ತಿಯನ್ನು ಸೆ.24 ರಂದು ಪಡೆದುಕೊಂಡಿತು.

ಆಲೆಟ್ಟಿ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀಪತಿ ಭಟ್ ಮಜಿಗುಂಡಿ ಯವರು ಸಂಘದ ಪರವಾಗಿ ಮಂಗಳೂರಿನ ಶಾಂತಿ ನಿಲಯ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಪ್ರಶಸ್ತಿ ಸ್ವೀಕರಿಸಿದರು.


ಈ ಸಂದರ್ಭದಲ್ಲಿ ಸ್ಕ್ಯಾಡ್ಸ್ ಸಂಸ್ಥೆಯ ಅಧ್ಯಕ್ಷರು ಮತ್ತು ನಿರ್ದೇಶಕರು ಉಪಸ್ಥಿತರಿದ್ದರು.