ಸೆ.28 ರಂದು ಗುತ್ತಿಗಾರಿನಲ್ಲಿ ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ

0

ಲಯನ್ಸ್ ಕ್ಲಬ್ ಗುತ್ತಿಗಾರು ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಯೋಗದಲ್ಲಿ ಸೆ.28 ರಂದು ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ನಡೆಯಲಿದೆ.

ಗುತ್ತಿಗಾರು ಲಯನ್ಸ್ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಬೆಳಗ್ಗೆ 9.30 ರಿಂದ ಅಪರಾಹ್ನ 4.00 ರ ತನಕ ನಡೆಯಲಿದೆ.

ಆಧಾರ್ ನೋಂದಣಿ ಮತ್ತು ತಿದ್ದುಪಡಿಗೆ ಬೇಕಾಗುವ ಅಗತ್ಯ ದಾಖಲೆಗಳ ಎಲ್ಲಾ ದಾಖಲೆಗಳ ಮೂಲ ಪ್ರತಿಯನ್ನು ತರುವುದು ಕಡ್ಡಾಯವಾಗಿದ್ದು ಹೊಸ ಆಧಾರ್ ನೋಂದಣಿಗೆ ಮಕ್ಕಳ ಜನನ ಪ್ರಮಾಣ ಪತ್ರ, ಪೋಷಕರ ಆಧಾರ್ ಕಾರ್ಡ್, ಮಗುವಿನ ಜೊತೆ ಪೋಷಕರು ಕಡ್ಡಾಯವಾಗಿ ಬರತಕ್ಕದ್ದು.


ಬೇರೆ ತಿದ್ದುಪಡಿಗಳಿದ್ದರೆ ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ರೇಷನ್ ಕಾರ್ಡ್, ಎಸ್ ಎಸ್ ಎಲ್ ಸಿ, ಪಿಯುಸಿ ಅಂಕ ಪಟ್ಟಿ, ಜನನ ಪ್ರಮಾಣ ಪತ್ರ ತರಬೇಕಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.