ಸೆ. 30 : ಗಾಂಧಿನಗರ ಕೆ.ಪಿ.ಎಸ್. ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ದಮಯಂತಿ ಅಡ್ಕಬಳೆ ನಿವೃತ್ತಿ

0

ಸುಳ್ಯ ಗಾಂಧಿನಗರದ ಕೆ.ಪಿ.ಎಸ್‌. ಶಾಲೆಯಲ್ಲಿ ಕಳೆದ 27 ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ದಮಯಂತಿ ಅಡ್ಕಬಳೆಯವರು ಸೆ. 30ರಂದು ನಿವೃತ್ತಿಯಾಗಲಿದ್ದಾರೆ.

ಪುತ್ತೂರು ತಾಲೂಕಿನ ಇಚ್ಲಂಪಾಡಿ ಗ್ರಾಮದ ಕೊರಮೇರು ದಿ|ಮೇದಪ್ಪ ಗೌಡ ಮತ್ತು ದಿ|ಪಾರ್ವತಿ ದಂಪತಿಗಳ ಚತುರ್ಥ ಪುತ್ರಿಯಾಗಿರುವ ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಇಚ್ಲಂಪಾಡಿಯ ಸ.ಹಿ.ಪ್ರಾ.ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಪುತ್ತೂರಿನ ಕೊಂಬೆಟ್ಟು ಸ.ಪ.ಪೂ. ಕಾಲೇಜಿನಲ್ಲಿ ಪೂರೈಸಿದ ಬಳಿಕ ಬೆಂಗಳೂರಿನ ಜಯನಗರದ ಬಿ.ಎಸ್‌.ಟಿ ಸಂಸ್ಥೆಯಲ್ಲಿ ತರಬೇತಿಯನ್ನು ಪದೆದಿದ್ದರು. ಬಳಿಕ ತಾನು ಕಲಿತ ಪ್ರಾಥಮಿಕ ಶಾಲೆ ಇಚ್ಲಂಪಾಡಿಯಲ್ಲಿ ಒಂದು ವರ್ಷ ಉಚಿತ ಸೇವೆ ಮಾಡಿದರು. 1986ರಲ್ಲಿ ಸ.ಹಿ.ಪ್ರಾ.ಶಾಲೆ ಐವರ್ನಾಡಿನಲ್ಲಿ ಸರಕಾರಿ ಶಿಕ್ಷಕಿಯಾಗಿ ಮೊದಲ ಹೆಜ್ಜೆ ಇಟ್ಟರು . ಅಲ್ಲಿ 1997ರವರೆಗೆ (ಸುಮಾರು 11 ವರ್ಷ) ಕರ್ತವ್ಯ ನಿರ್ವಹಿಸಿದ ಬಳಿಕ ಸುಳ್ಯದ ಗಾಂಧಿನಗರ ಕೆ.ಪಿ.ಎಸ್. ಪ್ರಾಥಮಿಕ ಶಾಲಾ ವಿಭಾಗಕ್ಕೆ ವರ್ಗಾವಣೆಗೊಂಡು ಬಂದರು. ಗಾಂಧಿನಗರ ಶಾಲೆಯಲ್ಲಿ 27 ವರ್ಷ 8 ತಿಂಗಳುಗಳ ಕಾಲ ಕರ್ತವ್ಯ ನಿರ್ವಹಿಸಿದರು. ತನ್ನ ಕರ್ತವ್ಯದ ಸಮಯದಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಕಾರ್ಯಕ್ರಮದಲ್ಲಿ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವಲ್ಲಿ ಪಾತ್ರ ವಹಿಸಿದ್ದರು. ಅಲ್ಲದೆ ಬಡ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ, ಅನಾರೋಗ್ಯದಿಂದ ಇರುವ ವಿದ್ಯಾರ್ಥಿಗಳಿಗೆ, ಸಂಘ ಸಂಸ್ಥೆಗಳಿಗೆ ಧನಸಹಾಯ ಮಾಡುತ್ತಿದ್ದರು.

ಇದೀಗ ಸುದೀರ್ಘ 38 ವರ್ಷ 8 ತಿಂಗಳುಗಳ ಕಾಲ ಸೇವೆ ಸಲ್ಲಿಸಿ ಶಿಕ್ಷಕ ವೃತ್ತಿಯಿಂದ ಸೆ. 30ರಂದು ನಿವೃತ್ತಿಯಾಗಲಿದ್ದಾರೆ.

ದಮಯಂತಿಯವರ ಪತಿ ತೀರ್ಥರಾಮ ಅಡ್ಕಬಳೆಯವರು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದು, ಪ್ರಸ್ತುತ ಸುಳ್ಯ ಗೌಡ ಸಂಘದ ಕಾರ್ಯದರ್ಶಿಯಾಗಿಯೂ, ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪುತ್ರ ಕಾರ್ತಿಕ್ ಎ.ಟಿ. ಮಾಸ್ಟರ್ ಡಿಗ್ರಿ ಹೊಂದಿ ಉದ್ಯಮಿಯಾಗಿದ್ದಾರೆ. ಪುತ್ರಿ ಡಾ| ಸಾತ್ವಿಕಾ ಎ.ಟಿ. ಬಿ.ಎನ್‌.ವೈ.ಎಸ್. ಪದವಿ ಮುಗಿಸಿ ಬೆಂಗಳೂರಿನಲ್ಲಿ ಪ್ರಥಮ ವರ್ಷದ ಎಂ.ಡಿ. ವ್ಯಾಸಂಗ ಮಾಡುತ್ತಿದ್ದಾರೆ.