ಕಲ್ಚೆರ್ಪೆ ಕಸದ ವಿಚಾರ : ವಿನಯರು ಕಲ್ಕುಡ ದೈವಸ್ಥಾನಕ್ಕೆ ಪ್ರಮಾಣಕ್ಕೆ ಬರಲಿ

0

ಒಂದಿಂಚೂ ಹಳೆ ಕಸ ತೆಗೆಸಲು ಅವರಿಂದಾಗಿಲ್ಲ : ಹೋರಾಟ ಸಮಿತಿ ಒಡೆಯಲು ಹುನ್ನಾರ

ದುಗಲಡ್ಕದಲ್ಲಿ ವಿಸ್ತಾರ ಜಾಗ ಇದೆಯಲ್ಲ ; ಅಲ್ಲಿಗೆ ಕಸ ಹಾಕಿಸಲಿ : ಕಲ್ಚೆರ್ಪೆ ಹೋರಾಟ ಸಮಿತಿ ಸವಾಲು

ಕಲ್ಚೆರ್ಪೆಯ ಕಸದ ವಿಚಾರದಲ್ಲಿ ನ.ಪಂ. ಮಾಜಿ ಅಧ್ಯಕ್ಷ – ಹಾಲಿ ಸದಸ್ಯ ವಿನಯ ಕುಮಾರ್ ಕಂದಡ್ಕ ಹಾಗೂ ಸದಸ್ಯರು ಪತ್ರಿಕಾಗೋಷ್ಠಿ ನಡೆಸಿ ನೀಡಿದ ಹೇಳಿಕೆಗೆ ಪ್ರತಿಯಾಗಿ ಸೆ.೨೮ರಂದು ಕಲ್ಚೆರ್ಪೆ ಪರಿಸರ ಹೋರಾಟ ಸಮಿತಿಯವರು ಪತ್ರಿಕಾಗೋಷ್ಠಿ ನಡೆಸಿ ಪ್ರತ್ಯುತ್ತರ ನೀಡಿದರಲ್ಲದೆ, ವಿನಯ ಕಂದಡ್ಕರು ಪ್ರಮಾಣಕ್ಕೆ ಆಹ್ವಾನಿಸಿದ್ದಾರೆ. ಆದರೆ ವನದುರ್ಗಿ ಸ್ಥಾನದಲ್ಲಿ ಆಣೆ ಪ್ರಮಾಣ ಮಾಡಲು ಅವಕಾಶ ಇಲ್ಲ. ಅವರು ಕಲ್ಕುಡ ದೈವಸ್ಥಾನಕ್ಕೆ ಬರಲಿ. ಅವರೇ ಸಮಯ ನಿಗಧಿ ಮಾಡಿ ಹೇಳಲಿ. ಅಲ್ಲಿ ಬಂದು ಪ್ರಮಾಣ ಮಾಡುತ್ತೇವೆ” ಎಂದು ಹೇಳಿದೆ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಅಶೋಕ್ ಪೀಚೆಯವರು, ನಮ್ಮ ಮಾತಿಗೆ ನಾವು ಬದ್ಧವಾಗಿzವೆ. ಅವರು ನಮ್ಮ ಮೇಲೆ ಮಾಡಿದ ಆರೋಪ ನಿರಾಧಾರವಾಗಿದ್ದು ಸಿಸಿ ಕ್ಯಾಮರ ತಿರುಗಿಸಿದ್ದು ಯಾರೆಂದು ಅವರಿಗೂ ಗೊತ್ತಿದೆ. ನನ್ನ ಮೇಲೆ ಆರೋಪ ಮಾಡಿದ್ದಾರೆ. ಅವರು ಕಲ್ಕುಡ ದೈವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ. ನಾನು ಹೊರಗಿನವನಲ್ಲ. ಕಲ್ಚೆರ್ಪೆ ಪರಿಸರದಲ್ಲೇ ಹುಟ್ಟಿ ಬೆಳೆದವನು. ಅದಕ್ಕೆ ಬೇಕಾದ ದಾಖಲೆಗಳು ನಮ್ಮಲ್ಲಿದೆ. ನಮಗೆ ಪೆರಾಜೆಯಲ್ಲಿಯೂ ಜಾಗ ಇದೆ ಎಂದ ಅವರು ಆ ಮಹಾನಾಯಕ ಎಲ್ಲಿಂದಲೋ ಬಂದಿರಬಹುದು ಅವರ ಹೇಳಿಕೆ ನೋಡುವಾಗ ನಮ್ಮ ಹೋರಾಟವನ್ನು ದಿಕ್ಕು ತಪ್ಪಿಸುವ ಹುನ್ನಾರ ಎನ್ನುವುದು ಸ್ಪಷ್ಟವಾಗುತ್ತಿದೆ. ಕಸದ ವಿಚಾರದಲ್ಲಿ ಅಲ್ಲಿಯ ಜನರಿಗೆ ಆಗುತ್ತಿರುವ ತೊಂದರೆಯ ನಿವಾರಣೆಗೆ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರಲ್ಲದೆ, ಬದ್ಧತೆಯ ಮಾತನಾಡುದ ಆ ಮಹಾನಾಯಕ ಅಧ್ಯಕ್ಷರಾಗಿ ಬಂದ ಆರಂಭದಲ್ಲೆ ಕಲ್ಚೆರ್ಪೆಯ ಘಟಕದ ಶೀಟು ಒಡೆದಿತ್ತು. ಇದುವರೆಗೆ ಅವರಿಂದ ಸರಿ ಪಡಿಸಲು ಆಗಿಲ್ಲ. ಟ್ಯಾಂಕಲ್ಲಿ ಹುಳ ಆಗಿದೆ, ಇಂಗು ಗುಂಡಿ ಮಾಡಿಸಲು ಆಗಿಲ್ಲ ಇದೇ ಅವರ ಬದ್ಧತೆಯೇ?. ಹಳೆ ಕಸಗಳನ್ನು ತೆಗೆಸುವುದಾಗಿ ಹೇಳಿದ್ದರೂ ಅವರಿಂದ ಒಂದಿಂಚೂ ಕಸ ಅಲ್ಲಿಂದ ತೆಗೆಸಲು ಆಗಿಲ್ಲ. ಮಳೆಗೆ ಪಯಸ್ವಿನಿ ಒಡಲು ಕಸ ಸೇರಿದ್ದು ಬಿಟ್ಟರೆ ಇವರಿಂದ ತೆಗೆಸಲು ಆಗಿಲ್ಲ ಎಂದು ವ್ಯಂಗ್ಯವಾಡಿದರು. ನಮ್ಮ ಹೋರಾಟ ನಮ್ಮ ಜೀವ ಮತ್ತು ಜೀವನದ ಪ್ರಶ್ನೆ. ಕಸದ ಸಮಸ್ಯೆ ವಿರುದ್ಧ ಹೋರಾಟ ನಿರಂತರ ಎಂದವರು ಹೇಳಿದರು. ಹೋರಾಟ ಸಮಿತಿ ಅಧ್ಯಕ್ಷ ಸುದೇಶ್ ಅರಂಬೂರು ಮಾತನಾಡಿ,ಶಾಸಕರು ಬಂದು ಕಲ್ಚೆರ್ಪೆ ಪರಿಸ್ಥಿತಿ ನೋಡಿದ್ದಾರೆ. ಅವರಿಗೆ ಅಲ್ಲಿಯ ಸ್ಥಿತಿ ಅರಿವಾಗಿದೆ. ಅವರು ಸ್ಥಳಾಂತರಕ್ಕೆ ಸೂಚಿಸಿದರೂ ಇವರ್‍ಯಾಕೆ ಮತ್ತೆ ಅಲ್ಲಿಗೆ ಕಸ ಹಾಕಬೇಕೆಂದು ಹೇಳುತ್ತಿರುವುದು ಎಂದು ಪ್ರಶ್ನಿಸಿದರು.


ಸಮಿತಿಯ ಜನಾರ್ದನ ಚೊಕ್ಕಾಡಿ ಮಾತನಾಡಿ, ನಾವು ವಲಸೆ ಬಂದವರೆಂಬ ಆರೋಪ ಸರಿಯಲ್ಲ. ನಾವೇನು ಅಧಿಕಾರದ ಆಸೆಯಿಂದ ಬಂದು ಅಲ್ಲಿ ಕುಳಿತವರಲ್ಲ ಜೀವನ ಕಟ್ಟಿಕೊಂಡು ಬಂದವರು. ಕಸದ ಸಮಸ್ಯೆಯ ಅರಿವು ಅವರಿಗೆ ಯಾಕೆ ಆಗುತ್ತಿಲ್ಲ. ಈಗ ವಿಪರೀತ ಹೊಗೆಯೂ ಬರುತ್ತಿದೆ ಇದೆಲ್ಲವೂ ಹಾನಿಕಾರಕವಲ್ಲವೇ? ಇದನ್ನು ಹೇಳಲು ವಿಜ್ಞಾನಿಯೇ ಬೇಕೆಂದಿಲ್ಲ. ಸಾಮಾನ್ಯರಿಗೂ ಗೊತ್ತಾಗುತ್ತದೆ ಎಂದ ಅವರು, ವನ ದುರ್ಗ ದೈವಸ್ಥಾನದಲ್ಲಿ ಆಣೆ ಪ್ರಮಾಣಕ್ಕೆ ಅವಕಾಶ ಇಲ್ಲ. ಬೇರೆ ಕಡೆ ಪ್ರಮಾಣ ಮಾಡಲಿ. ಇಷ್ಟೆಲ್ಲ ಮಾತನಾಡುವ ಅವರು ವನದುರ್ಗಾ ಕ್ಷೇತ್ರಕ್ಕೆ ಬಂದಿದ್ದಾರ ? ಎಂದು ಪ್ರಶ್ನಿಸಿದರು. ಸ್ಥಳೀಯ ನಿವಾಸಿ ಬಾಲಚಂದ್ರ ಪೆರಾಜೆ ಮಾತನಾಡಿ, '`ಕಸದಿಂದ, ಬರ್ನಿಂಗ್ ಮೆಷಿನ್‌ನಿಂದ ಬರುವ ಹೊಗೆಯಿಂದ ಅನುಭವಿಸಿದ ಕಷ್ಟದ ಕುರಿತು ವಿವರಿಸಿದರು. ಗೋಕುಲ್ ದಾಸ್ ಕೆ ಮಾತನಾಡಿ,ನಾವು ಸೂಜಿ ಮತ್ತು ನೂಲಿನಂತಿ ಎಲ್ಲರನ್ನು ಜತೆ ಸೇರಿಸಿಕೊಂಡು ಸೌಹಾರ್ದವಾಗಿ ಬದುಕುವವರು. ಆದರೆ ಅವರ ನಾಲಗೆ ಕತ್ತರಿ ಇದ್ದ ಹಾಗೆ ಒಟ್ಟಾಗಿರುವವರನ್ನು ಬೇರ್ಪಡಿಸುವುದೇ ಅವರು. ಅಧ್ಯಕ್ಷರಾಗಿದ್ದ ಸಂದರ್ಭ ಅಲ್ಲಿ ನಡೆಯುವ ಶ್ರಮದಾನದಲ್ಲಿ ಅವರು ಭಾಗವಹಿಸುತ್ತಿದ್ದರು. ಬಳಿಕ ಬರಲೇ ಇಲ್ಲ. ಆ ಸಂದರ್ಭ ಶ್ರಮದಾನದ ಫೋಟೊ ಬಳಸಿ ಬಿಲ್ಲು ಮಾಡಿರಲುಬಹುದು ಎಂದ ಅವರು ಈ ವಿಚಾರದಲ್ಲಿ ಅವರು ಕಸದ ಸಮಸ್ಯೆ ವಿಚಾರದಲ್ಲಿ ರಾಜಕೀಯ ಮಾಡಬಾರದು. ಪರಿಸರದ ಸಮಸ್ಯೆಯನ್ನು ಅರಿತು ಅಲ್ಲಿಯ ಜನರ ಭಾವನೆಗೆ ಬೆಲೆ ಕೊಡಬೇಕು ಎಂದು ಹೇಳಿದರು.


ದುಗಲಡ್ಕದಲ್ಲಿ ಜಾಗ ಇದೆಯಲ್ಲ : ದಾಖಲೆ ಬಿಡುಗಡೆ ಮಾಡಲಿ


ದುಗಲಡ್ಕದಲ್ಲಿ ವಿಸ್ತಾರವಾದ ಜಾಗ ಇದೆ ಎಂದು ಹೇಳುತ್ತಾರಲ್ಲ. ಅಲ್ಲಿಗೆ ನಗರದ ಕಸ ತಂದು ಹಾಕಲಿ ಅದನ್ನು ವಿನಯರು ಮಾಡಿಸಲಿ ನೋಡೋಣ ಎಂದು ಗೋಕುಲ್‌ದಾಸ್ ಸವಾಲೆಸೆದರಲ್ಲದೆ, ಕಲ್ಚೆರ್ಪೆಗೆ ಇದುವರೆಗೆ ಎಷ್ಟು ದುಡ್ಡು ಹಾಕಿದ್ದಾರೆ ಎನ್ನುವ ದಾಖಲೆ ಬಿಡುಗಡೆ ಮಾಡಲಿ. ಈಗ ಮತ್ತೆ ೫ ಲಕ್ಷ ರೂ ಇಟ್ಟಿದ್ದಾರೆಂಬ ಮಾಹಿತಿ ಇದೆ ಇದೆಲ್ಲ ಏನು? ಇದನ್ನೇ ನಾವು ಹೇಳಿದ್ದು ಎಂದು ಅವರು ಹೇಳಿದರು.


ವಿನಯರು ಯಾಕೆ ಹೋರಾಟ ಮಾಡಿಲ್ಲ


ಜಾತ್ರೆ ಸಂದರ್ಭ ನಾವು ದುಡ್ಡು ಮಾಡುತ್ತೇವೆ. ಪ್ರಕಾಶ್ ಥಿಯೇಟರ್ ಜಾಗದಲ್ಲಿ ಜೂಜು ಇತ್ಯಾದಿ ಹೇಳಿಕೆ ನೀಡಿದ್ದಾರೆ. ಜಾತ್ರೆ ಸಂದರ್ಭ ಕಡಿಮೆಗೆ ಸ್ಥಳ ಬಾಡಿಗೆ ನೀಡಬೇಕೆಂದು ಹೋರಾಟ ಮಾಡಿದವರೇ ನಾವು. ಬಡವರು ಬರುವಾಗ ದೇವಸ್ಥಾನದವರು ಹೆಚ್ಚಿಗೆ ದುಡ್ಡು ತೆಗೆಯಬಾರದೆಂದು ನಾವು ಹೇಳಿzವೆ. ಇವರು ಬಡವರ ಪರ ನಿಂತಿದ್ದಾರಾ?. ಪ್ರಕಾಶ್ ಥಿಯೇಟರ್ ಎದುರಿನ ಜಾಗ ಗೋಕುಲ್ ದಾಸರಿಗೆ ಸೇರಿದ್ದಲ್ಲ. ಅದರ ಮಾಲಕರೇ ಬೇರೆ ಇದ್ದಾರೆ. ಅಲ್ಲಿ ಜೂಜು ನಡೆಯುತ್ತಿದ್ದರೆ ಇವರು ಯಾಕೆ ನೋಡಿಯೂ ಯಾಕೆ ಸುಮ್ಮನಿದ್ದರು. ಅಲ್ಲವೋ ಅವರು ಅಲ್ಲಿ ಆಡಿದ್ದಾರಾ? ಎಂದು ಪ್ರಶ್ನಿಸಿದರು.


ನಕ್ಸಲೈಟ್ ಪದ ಬಳಕೆಗೆ ಆಕ್ಷೇಪ


ಪತ್ರಿಕಾಗೋಷ್ಠಿಯಲ್ಲಿ ನಕ್ಸಲೈಟ್ ಪದವನ್ನು ವಿನಯರು ಬಳಸಿದ್ದಾರೆ. ಅದು ಅಕ್ಷಮ್ಯ ಎಂದು ಹೇಳಿದ ಹೋರಾಟ ಸಮಿತಿಯವರು, ಅವರು ಕಲ್ಚೆರ್ಪೆ ಬಂದು ಅವರು ಆರೋಗ್ಯವೇ ಹದಗೆಟ್ಟಿರಬೇಕು. ಆದ್ದರಿಂದ ಹಾಗೆಲ್ಲ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಯೂಸುಪ್ ಅಂಜಿಕಾರು ಇದ್ದರು.