ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ಕಳೆದ ಐವತ್ತೈದು ವರ್ಷಗಳಿಂದ ವ್ಯಾಪಾರ ಜೀವನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಹಿರಿಯ ಉದ್ಯಮಿ ಕಲ್ಲುಗುಂಡಿ ನ್ಯಾಷನಲ್ ಸ್ಟೋರ್ ಮಾಲಕ ಅಬ್ಬಾಸ್ ಹಾಜಿ ಅವರು ತಮ್ಮ ಸುಧೀರ್ಘ ವ್ಯಾಪಾರ ಜೀವನದಿಂದ ನಿವೃತ್ತಿ ಹೊಂದಿದ್ದಾರೆ.
ಸಂಪಾಜೆ ವರ್ತಕರ ಸಂಘದ ಸದಸ್ಯರಾದ ಅಬ್ಬಾಸ್ ಹಾಜಿ ಅವರು ಸಂಪಾಜೆ ಗ್ರಾಮ ಮತ್ತು ನೆರೆಯ ಚೆಂಬು,ಕೊಡಗು ಸಂಪಾಜೆ ಗ್ರಾಮದ ಜನರಿಗೆ ಪ್ರಥಮ ಬಾರಿಗೆ ಜೆರಾಕ್ಸ್, ಟೆಲಿಫೋನ್, ಕಾಯಿನ್ ಬೂತ್ , ಎಸ್.ಟಿ.ಡಿ. ಬೂತ್, ಟೈಪಿಂಗ್ ಮಿಷನ್ ಮೂಲಕ ಗ್ರಾಮೀಣ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನ್ಯಾಯಬೆಲೆ ವ್ಯವಸ್ಥೆಯನ್ನು ಒದಗಿಸಿದ್ದರು.
ಸುಳ್ಯ ತಾಲೂಕಿನಲ್ಲಿ ಪ್ರಥಮ ಉತ್ತಮ ಕಾರ್ಯ ನಿರ್ವಹಣೆ ಪ್ರಶಸ್ತಿಯನ್ನು ಪಡೆದ ಅಬ್ಬಾಸ್ ಹಾಜಿ ಅವರು ದೂರದ ಊರಿನ ಪ್ರಯಾಣವನ್ನು ಆಗಿನ ಕಾಲದಲ್ಲಿ ಪಾರದರ್ಶಕ ವ್ಯವಸ್ಥೆ ಅಡಿಯಲ್ಲಿ ಒದಗಿಸಿಕೊಟ್ಟು ಆದರ್ಶ ವ್ಯಕ್ತಿಯಾಗಿದ್ದರು.
ವ್ಯಾಪಾರ ಜೀವನದಿಂದ ನಿವೃತ್ತಿ ಹೊಂದಿದ ಹಾಜಿ ಅಬ್ಬಾಸ್ ಅವರನ್ನು ಕಲ್ಲುಗುಂಡಿ ಪಂಚಮಿ ಸ್ಟೋರ್ ಮಾಲಕ ವಿಶ್ವನಾಥ, ಜಾಫರ್ ಸಾಧಿಕ್ ಕುಂಭಕ್ಕೋಡ್, ಯತೀಶ್ ಪೇರಡ್ಕ ಮತ್ತಿತರರು ಸೇರಿ ಸನ್ಮಾನಿಸಿದರು.