ನಿಂತಿಕಲ್ಲು: ಕೆ.ಎಸ್ ಗೌಡ ಪ.ಪೂ. ಕಾಲೇಜಿನಲ್ಲಿ ಸುಳ್ಯ ತಾಲೂಕು ಮಟ್ಟದ ಪ.ಪೂ. ಕಾಲೇಜುಗಳ ಬಾಲಕ – ಬಾಲಕಿಯರ ಕ್ರೀಡಾ ಕೂಟ

0

ಸಂಘಟನಾ ಸಮಿತಿ ಅಧ್ಯಕ್ಷರಾಗಿ ಬಾಲಕ್ರಷ್ಣ ರೈ ಪಾದೆಕಲ್ಲು

ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ದ.ಕ. ಜಿಲ್ಲೆ ಮತ್ತು ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜು ನಿಂತಿಕಲ್ಲು ಇದರ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ – ಬಾಲಕಿಯರ ಕ್ರೀಡಾ ಕೂಟ ನಿಂತಿಕಲ್ಲಿನ ಎಣ್ಮೂರಿನಲ್ಲಿರುವ ಕೆ.ಎಸ್ ಗೌಡ ಕ್ರೀಡಾಂಗಣದಲ್ಲಿ ಅಕ್ಟೋಬರ್ 5ರಂದು ನಡೆಯಲಿದ್ದು, ಸಂಘಟನಾ ಸಮಿತಿ ಅಧ್ಯಕ್ಷರಾಗಿ ಬಾಲಕ್ರಷ್ಣ ರೈ ಪಾದೆಕಲ್ಲು ಆಯ್ಕೆಯಾಗಿದ್ದಾರೆ.

ಕೆ.ಎಸ್ ಗೌಡ ಸಮೂಹ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷಕರು, ಶಿಕ್ಷಕ -ರಕ್ಷಕ ಸಂಘದ ಪೂರ್ವಾಧ್ಯಕ್ಷ, ಉಪಾಧ್ಯಕ್ಷರು ಹಾಗೂ ಆಡಳಿತ ಸಮಿತಿಯ ಸಭೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಪೂರ್ವಾಧ್ಯಕ್ಷರಾದ ಬಾಲಕೃಷ್ಣ ರೈ ಪಾದೆಕಲ್ಲುರವರನ್ನು ಆಯ್ಕೆಮಾಡಲಾಯಿತು.

ಸಭೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಯಮುನಾ ಕಾರ್ಜ, ಪೂರ್ವಾಧ್ಯಕ್ಷ ಕುಮಾರಸ್ವಾಮಿ ಕೆ.ಎಸ್, ಶ್ರೀಮತಿ ನಯನ ಅಗಲ್ತ, ಶ್ರೀಮತಿ ಜಯಲಕ್ಷ್ಮಿ ಎಂ, ಎಸ್.ಪಿ.ಪಿ.ಐ.ಟಿ.ಐ ಯ ದಯಾನಂದ ಕೆಬ್ಬೋಡಿ, ಶ್ರೀಧರ, ಸಮೂಹ ವಿದ್ಯಾ ಸಂಸ್ಥೆಗಳ ಕಾರ್ಯಕ್ರಮಾಧಿಕಾರಿ ಪ್ರಸನ್ನ ವೈ.ಟಿ, ಮುಖ್ಯ ಗುರುಗಳಾದ ಉಮೇಶ್ ಗೌಡ ಹೇಮಳ, ಶಿಕ್ಷಕರಾದ ಶ್ರೀಮತಿ ವೇದಾವತಿ ಎಸ್, ಶ್ರೀಮತಿ ವಿಶಾಲಾಕ್ಷಿ, ಮೋಹನ್ ಕುಮಾರ್, ಅಜಿತ್ ಐವರ್ನಾಡು, ಉಪನ್ಯಾಸಕರಾದ ಉಜ್ವಲ್ ಕೆ.ಎಚ್ ಜೀವನ್ ಎಸ್.ಎಚ್, ಜ್ಯೋತ್ಸ್ನಾ, ಸಮೀಕ್ಷಾ ಸಂಧ್ಯಾ, ಜಾಸ್ಮಿನ್, ಸೌಮ್ಯ ಉಪಸ್ಥಿತರಿದ್ದರು. ಪ್ರಾಚಾರ್ಯರಾದ ಸದಾನಂದ ರೈ ಕೂವೆಂಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಜೀವನ್ ಎಸ್‌‌.ಎಚ್ ವಂದಿಸಿದರು.