ಮೊಗರ್ಪಣೆ ಮುಹಿಯದ್ದೀನ್ ರಿಫಾಹಿಯಾ ದಫ್ ಅಸೋಷಿಯೇಷನ್ (ಎಂಆರ್‌ಡಿಎ) ಸಮಿತಿ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

0

ಮೊಗರ್ಪಣೆ ಮುಹಿಯದ್ದೀನ್ ರಿಫಾಯಿಯ ದಫ್ ಅಸೋಸಿಯೇಷನ್ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನಾ ಸಭೆ ಮೊಗರ್ಪಣೆ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಮಹಾಸಭೆಯ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್ ವಹಿಸಿದ್ದರು.ವರದಿ ಮತ್ತು ಲೆಕ್ಕಪತ್ರವನ್ನು ಕೋಶಾಧಿಕಾರಿ ಹಾಜಿ ಎಚ್ ಎ ಉಮ್ಮರ್ ಮಂಡಿಸಿದರು.
ಬಳಿಕ ಮುಂದಿನ ದಿನಗಳಲ್ಲಿ ರೂಪಿಸಬೇಕಾದ ಕಾರ್ಯ ಯೋಜನೆಗಳ ಬಗ್ಗೆ ಚರ್ಚೆಗಳು ನಡೆಯಿತು.
ಈ ಸಂದರ್ಭದಲ್ಲಿ ನೂತನ ಸಮಿತಿ ರಚಿಸಿ ಅಧ್ಯಕ್ಷರಾಗಿ ಮೊಹಮ್ಮದ್ ಜಲೀಲ್ ಎರಡನೇ ಬಾರಿಗೆ ಆಯ್ಕೆಯಾದರು.ಪ್ರಧಾನ ಕಾರ್ಯದರ್ಶಿಯಾಗಿ ಶಾಫಿ ಅಡ್ಕ ,ಉಪಾಧ್ಯಕ್ಷರಾಗಿ ರಶೀದ್ ಕೆವಿಜಿ, ಜೊತೆ ಕಾರ್ಯದರ್ಶಿಯಾಗಿ ಶಮೀರ್ ಅಡ್ಕ , ದಫ್ ಉಸ್ತುವಾರಿಯಾಗಿ ಸಂಶುದ್ದೀನ್ ಮೂಸ ಸದಸ್ಯರುಗಳಾಗಿ ಬಶೀರ್ ಕೆ ಎಂ,ಅಬ್ದುಲ್ಲಾ ಹಾಜಿ ಜಯನಗರ,ಅಬ್ದುಲ್ಲಾ ಡಿ ಇವರುಗಳು ಆಯ್ಕೆಯಾದರು.
ಶಮೀರ್ ಅಡ್ಕ ಸ್ವಾಗತಿಸಿ ಎಚ್ ಎ ಉಮ್ಮರ್ ಹಾಜಿ ವಂದಿಸಿದರು.