ಮೆಕ್ಯಾನಿಕ್ ಶೇಷಪ್ಪ ನಾಯ್ಕ ಗೂಡಿಂಜ ನಿಧನ

0

ಆಲೆಟ್ಟಿ ಗ್ರಾಮದ ಗೂಡಿಂಜ ನಿವಾಸಿ ದಿ.ಬಾಬು ನಾಯ್ಕ್ ರವರ ಪುತ್ರ ಶೇಷಪ್ಪ ನಾಯ್ಕ್ ರವರು ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ
ಸೆ.30 ರಂದು ನಿಧನರಾದರು. ಅವರಿಗೆ 49 ವರ್ಷ ವಯಸ್ಸಾಗಿತ್ತು.

ಮೃತರು ತಾಯಿ ಶ್ರೀಮತಿ ಜಾನಕಿ, ಪತ್ನಿ ಶ್ರೀಮತಿ ದಮಯಂತಿ ಮತ್ತು ಸಹೋದರರಾದ ನಾರಾಯಣ ನಾಯ್ಕ, ಕುಶಾಲಪ್ಪ ನಾಯ್ಕ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತ ಯುವಕ ಸುಳ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ಚತುಷ್ಚಕ್ರ ವಾಹನಗಳ ದುರಸ್ತಿ ಪಡಿಸುವ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಆಲೆಟ್ಟಿ ಬಡ್ಡಡ್ಕ ಭಾಗದಲ್ಲಿ ವಾಹನಗಳು ಕೈಕೊಟ್ಟ ಸಂದರ್ಭದಲ್ಲಿ ಅಪದ್ಭಾಂಧವನಂತೆ ಬಂದು ರಿಪೇರಿ ಮಾಡಿಕೊಡುತ್ತಿದ್ದ ಅಚ್ಚು ಮೆಚ್ಚಿನ ವ್ಯಕ್ತಿಯಾಗಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯನಾಗಿ ಗುರುತಿಸಿಕೊಂಡಿದ್ದರು.