ಅತಿ ವಿರಳ ಕಾಯಿಲೆಯಿಂದ ಬಳಲುತ್ತಿರುವ ಚಾಂದಿನಿಯವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ ಮಾಜಿ ಸಚಿವ ಎಸ್ ಅಂಗಾರ, ಶಾಸಕಿ ಭಾಗೀರಥಿ ಮುರುಳ್ಯ

0

ಅತಿ ವಿರಳ ಕಾಯಿಲೆ (HYPER IGE mediate Mast cell activation syndrome) ಯಿಂದ ಬಳಲಿ ಈಗ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಂದಿನಿ ಜಿ.ಡಿ. ಅವರನ್ನು ಮಾಜಿ ಸಚಿವ ಎಸ್ ಅಂಗಾರ, ಶಾಸಕಿ ಭಾಗೀರಥಿ ಮುರುಳ್ಯ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಚಾಂದಿನಿ ಅವರು ಈಗ ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅತಿ ವಿರಳ ಕಾಯಿಲೆಯಿಂದ ಬಳಲುತ್ತಿದ್ದು ಲಕ್ಷಾಂತರ ರೂ ಖರ್ಚಾಗಿದೆ. ಚಿಕಿತ್ಸೆಗೆ ಸರಕಾರದಿಂದ ಹೆಚ್ಚಿನ ನೆರವು ಒದಗಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಮನವಿ ಸಲ್ಲಿಸಿದರು.

ಶಾಸಕರು ಭೇಟಿ ನೀಡುವ ಸಂದರ್ಭ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಸುವರ್ಣಿನಿ ಎನ್.ಎಸ್ ಜೊತೆಗಿದ್ದರು.