ಸುಳ್ಯದ ಗಾಂಧಿನಗರದಲ್ಲಿ ಗಾಂಧಿ ಪ್ರತಿಮೆ ಅನಾವರಣ

0

ವಿಶ್ವವೇ ಗುರುತಿಸುವಂತೆ ಮಾಡಿಕೊಂಡ ವ್ಯಕ್ತಿ ಗಾಂಧೀಜಿ :ಡಾ. ಸುಂದರ್ ಕೇನಾಜೆ

ಜಗಕ್ಕೆ ಪ್ರೀತಿಯನ್ನು ಬೆಳೆಸಿದ ವ್ಯಕ್ತಿ ಗಾಂಧೀಜಿ :ಡಾ.ಯು.ಪಿ.ಶಿವಾನಂದ

ಗಾಂಧಿ ಚಿಂತನ ವೇದಿಕೆ ಸುಳ್ಯ ಇದರ ನೇತೃತ್ವದಲ್ಲಿ ಅ.೨ರಂದು ಸುಳ್ಯ ನಗರದಲ್ಲಿ ಗಾಂಧಿ ನಡಿಗೆ ಹಾಗೂ ಗಾಂಧಿ ನಗರದ ಗಾಂಧಿ ಪಾರ್ಕ್‌ನಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಿತು.


ಮಹಾತ್ಮಾಗಾಂಧಿ ಪ್ರತಿಮೆ ಯನ್ನು ಸುಳ್ಯ ಸುದ್ಧಿ ಸಾಮೂಹ ಸಂಸ್ಥೆಗಳ ಮಾಲಕರಾದ ಡಾ. ಯು.ಪಿ. ಶಿವಾನಂದ, ಹಿರಿಯರಾದ ಗಾಂಧಿ ಚಿಂತಕರಾದ ಅಣ್ಣಾ ವಿನಯ್‌ಚಂದ್ರ, ಅಖಿಲ ಭಾರತ ಸಂತ ಸಮಿತಿ ರಾಜ್ಯ ಪ್ರ. ಕಾರ್ಯದರ್ಶಿ ಸ್ವಾಮಿ ರಾಜೇಶ್‌ನಾಥ್ ಜಿ. ಸೇರಿದಂತೆ ವಿವಿಧ ಗಣ್ಯರುಗಳು ಅನಾವರಣಗೊಳಿಸಿದರು.

ಬಳಿಕ ನಡೆದ ಗಾಂಧಿ ಚಿಂತನ ಸಭೆಯ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಆರಂಭದಲ್ಲಿ ವೇದಿಕೆಯಲ್ಲಿ ದೀಪಾಂಜಲಿ ಮಹಿಳಾ ಭಜನಾ ತಂಡದಿಂದ ಭಜನೆ, ಗಾಂಧಿನಗರ ಮದರಸ ವಿದ್ಯಾರ್ಥಿಗಳಿಂದ ದಫ್ ಗೀತೆ, ಸೈಂಟ್ ಜೋಸೆಫ್ ಚರ್ಚ್ ವತಿಯಿಂದ ಕ್ರಿಶ್ಚಿಯನ್ ಧರ್ಮ ಗೀತೆಯನ್ನು ಹಾಡುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪ್ರಾಸ್ತಾವಿಕ ಮಾತನಾಡಿದ ಗಾಂಧಿ ಚಿಂತನ ವೇದಿಕೆಯ ಸಂಚಾಲಕ ಹರೀಶ್ ಬಂಟ್ವಾಳ್ ವೇದಿಕೆ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿ ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿ ಸರ್ವರನ್ನು ಸ್ವಾಗತಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ವೇದಿಕೆಯ ಸಂಚಾಲಕರು ಸಾಹಿತಿ ಹಾಗೂ ಅಧ್ಯಾಪಕರಾದ ಡಾ. ಸುಂದರ್ ಕೇನಾಜೆ ಹಾಗೂ ಸುದ್ದಿ ಸಮೂಹ ಸಂಸ್ಥೆಯ ಮಾಲಕರಾದ ಡಾ. ಯು ಪಿ ಶಿವಾನಂದ,


ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್,ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ, ಸ್ವಾಮಿ ರಾಜೇಶ್ ನಾಥ್ ಜಿ ರವರು ಗಾಂಧಿ ಚಿಂತನೆ ಬಗ್ಗೆ ಮಾತನಾಡಿ ‘ಗಾಂಧಿಜಿ ಯವರು ಸತ್ಯ ಮತ್ತು ಅಹಿಂಸೆ ಮಾತ್ರ ವಲ್ಲದೆ ಪ್ರೀತಿಯನ್ನು ಕೂಡ ಬೆಳೆಸಿ ವಿಶ್ವದಲ್ಲಿಯೇ ಗುರುತಿಸಿಕೊಂಡವರಾಗಿದ್ದಾರೆ.


ಗಾಂಧಿಯವರು ದೇಶದ ರಾಜನಾಗಿ, ಪ್ರಧಾನಿಯಾಗಿ ಅಥವಾ ಅಧ್ಯಕ್ಷ ರಾಗಿ ಇದ್ದವರಲ್ಲ. ಇದು ಯಾವುದೂ ಕೂಡ ಆಗದೆ ಅವರ ಸತ್ಯದ ಮಾರ್ಗದಿಂದ ವಿಶ್ವದಲ್ಲಿ ಮಹಾನ್ ವ್ಯಕ್ತಿಯಾದವರು. ಈ ಕಾರಣಗಳಿಂದ ಇಂದಿಗೂ ಜಗತ್ತಿನಾದ್ಯಂತ ಗಾಂಧಿಯ ಸ್ಮಾರಕಗಳು, ಪ್ರತಿಮೆಗಳು,ಗಾಂಧಿ ವಿಚಾರಧಾರೆಯ ಕೇಂದ್ರಗಳು ಇರಲು ಸಾಧ್ಯವಾಗಿದೆ.
ಗಾಂಧಿ ತತ್ವವನ್ನು ಕೇವಲ ಕೇಳುವುದು ಮತ್ತು ಅದನ್ನು ಇತರರಿಗೆ ಹೇಳಿಕೊಡುವುದು ಮಾತ್ರವಲ್ಲದೇ ನಮ್ಮ ಪ್ರತಿಯೊಬ್ಬರ ಜೀವನದಲ್ಲಿ ಅದನ್ನು ಪಾಲಿಸಬೇಕು. ಆದರೆ ಮಾತ್ರ ನಾವು ಗಾಂಧಿ ಚಿಂತಕರು ಆಗಲು ಸಾಧ್ಯ ಎಂದರು.ಸುಳ್ಯದ ಈ ಭಾಗದಲ್ಲಿ ಗಾಂಧಿ ಸ್ಮಾರಕ ನಿರ್ಮಿಸಿದ ಸಂಘಟಕರ ಕಾರ್ಯ ಮೆಚ್ಚುವಂತ್ತದ್ದೇ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭಾರೈಸಿದರು.


ವೇದಿಕೆಯಲ್ಲಿ ಸೈಂಟ್ ಬ್ರಿಜಿಡ್ಸ್ ಚರ್ಚ್ ಗುರುಗಳಾದ ರ ಫಾ| ವಿಕ್ಟರ್ ಡಿಸೋಜ, ಗಾಂಧಿನಗರ ಜಮಾಅತ್ ಅಧ್ಯಕ್ಷ ಹಾಜಿ ಮಹಮ್ಮದ್ ಕೆ.ಎಂ.ಎಸ್., ಮಾಜಿ ಅಧ್ಯಕ್ಷ ಆದಂ ಹಾಜಿ ಕಮ್ಮಾಡಿ,ವೇದಿಕೆ ಸಂಚಾಲಕರುಗಳಾದ ಶಂಕರ್ ಪೆರಾಜೆ, ಚಂದ್ರಶೇಖರ ಪೇರಾಲು ಉಪಸ್ಥಿತರಿದ್ದರು.

ಸಂಚಾಲಕ ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿ ಶರೀಫ್ ಕಂಠಿ ವಂದಿಸಿದರು.