ಅರಂತೋಡು: ತೆಕ್ಕಿಲ್ ಸೂಕರ್ ಲೀಗ್ ಫುಟ್ಬಾಲ್ ಪಂದ್ಯಾಟ

0

ಅರಂತೋಡಿನ ತೆಕ್ಕಿಲ್ ಸೂಕರ್ ಲೀಗ್ ಐದನೇ ಆವೃತ್ತಿಯ ಪುಟ್ಬಾಲ್ ಪಂದ್ಯಾಟವು ಅರಂತೋಡು ಶಾಲಾ ಮೈದಾನದಲ್ಲಿ ಅ.2ರಂದು ನಡೆಯಿತು.

ಕಾರ್ಯಕ್ರಮವನ್ನು ಉದ್ಯಮಿ ಹಬೀಬ್ ಗುಂಡಿ ಅರಂತೋಡು ಅವರು ಉದ್ಘಾಟಿಸಿ, ಶುಭಹಾರೈಸಿದರು. ಪುಟ್ಬಾಲ್ ಪಂದ್ಯಕೂಟದಲ್ಲಿ ಬಲಿಷ್ಠ 6 ತಂಡಗಳ ನಡುವೆ ತೆಕ್ಕಿಲ್ ಸೂಕರ್ ಲೀಗ್ -ಸೀಸನ್ 5 ಕಿರೀಟಕ್ಕೆ ತೀವ್ರ ಜಿದ್ದಾ ಜಿದ್ದಿನ್ ಪೈಪೋಟಿ ನಡೆಯಿತು.

ಸಿ. ಕೆ. ಲೆಜೆಂಡ್ಸ್ ತಂಡವು ಚಾಂಪಿಯನ್ ಹಾಗೂ ಕಾರ್ಗಿಲ್ ಎಫ್. ಸಿ‌. ತಂಡವು ರನ್ನರ್ ಪ್ರಶಸ್ತಿಯನ್ನು ಪಡೆಯಿತು.

ಸಮಾರೂಪ ಸಮಾರಂಭದಲ್ಲಿ ತೆಕ್ಕಿಲ್ ಸೂಕರ್ ನ ಟಿ. ಎಂ. ಶಹೀದ್ ತೆಕ್ಕಿಲ್ ಅವರು ಅಧ್ಯಕ್ಷತೆ ವಹಿಸಿದರು. ಟಿ.ಎಂ. ಶಹೀದ್ ತೆಕ್ಕಿಲ್, ಫ್ರೆಂಡ್ಸ್ ಗೂನಡ್ಕದ ಸಾಜಿದ್ ಐ. ಜಿ. ಗೂನಡ್ಕ ಅವರು ಪ್ರಶಸ್ತಿ ವಿತರಿಸಿದರು. ಅನ್ವರ್ ಅರಂತೋಡು, ಖಾದರ್ ಮೊಟ್ಟೆಂಗಾರ್ , ತಾಜುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.
ಪಂದ್ಯಾಟವನ್ನು ಫ್ರೆಂಡ್ಸ್ ಗೂನಡ್ಕದ ಇಕ್ಬಾಲ್ ಮೊಟ್ಟೆಂಗಾರ್ ಮತ್ತು ಅಝೀಝ್ ಗೂನಡ್ಕ ಅವರು ಸಂಘಟಸಿದರು‌. ಸುನೈಲ್ ಹಾಗು ನಿಜಾರ್ ಪಂದ್ಯಾಟದ ನಿರ್ಣಾಯಕರಾಗಿ ಸಹಕರಿಸಿದರು.

ಟಿ. ಎಂ. ಇಜಾಸ್ ಗೂನಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಖಾದರ್ ಮೊಟ್ಟೆಂಗಾರ್ ವಂದಿಸಿದರು.