ಸುಬ್ರಹ್ಮಣ್ಯದಲ್ಲಿ ಇಂದು ಊದು ಪೂಜೆ, ಅ.6 ಹುಲಿವೇಷ “ಹುಲಿಕುಣಿತ”

0

ಸುಬ್ರಹ್ಮಣ್ಯದ
ಟೀಮ್ ಕುಕ್ಕೇ ಟೈಗರ್ಸ್
ತಂಡದ ವತಿಯಿಂದ ನವರಾತ್ರಿ ಪ್ರಯುಕ್ತ ದಸರಾ ಮಹೋತ್ಸವದ ಅಂಗವಾಗಿ ನಾಲ್ಕನೇ ವರ್ಷದ ಹುಲಿವೇಷ ಪ್ರದರ್ಶನ, “ಹುಲಿಕುಣಿತ” ಕುಕ್ಕೇ ಸುಬ್ರಹ್ಮಣ್ಯದಲ್ಲಿ ಪ್ರದರ್ಶನಗೊಳ್ಳಲಿದೆ.

ಅ.5 ರ ಸಂಜೆ 6.30ರಿಂದ ಕುಕ್ಕೇ ಸುಬ್ರಹ್ಮಣ್ಯ ದೇವರ ರಥಬೀದಿಯಿಂದ ವೈಭವಭರಿತ ವಿಶೇಷ ತಾಸೆ, ಬ್ಯಾಂಡ್ ವಾದ್ಯಗಳ ಮೂಲಕ ಹುಲಿವೇಷದ ಜಂಡೆ ಮೆರವಣಿಗೆ ನಡೆಯಲಿದ್ದು ಬಿಳಿಕ ಕಾಶಿಕಟ್ಟೆ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ರಾತ್ರಿ 8ರಿಂದ ವಿಶೇಷ ಅತಿಥಿ ಅಬ್ಯಾಗತರ ಉಪಸ್ಥಿತಿಯಲ್ಲಿ, ಜಿಲ್ಲೆಯ ಪ್ರತಿಷ್ಟಿತ ತಾಸೆ ಮತ್ತು ವಾದ್ಯ ತಂಡಗಳ ಮೇಳದೊಂದಿಗೆ ಅಧ್ಧೂರಿಯ ಊದುಪೂಜೆ ಕಾರ್ಯಕ್ರಮ ನೆರವೇರಲಿದೆ.
ಸೆ.6 ರಬೆಳಿಗ್ಗೆ 8.30 ರಿಂದ ದಾಖಲೆಯ 110 ಕ್ಕೂ ಅಧಿಕ ಹುಲಿವೇಷಗಳಿಂದ ಹುಲಿ ಕುಣಿತ ಹೊರಡಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.