ಐವರ್ನಾಡು : ಬೃಹತ್ ಮಾಸಿಕ ಸ್ವಚ್ಛತಾ ಕಾರ್ಯಕ್ರಮ

0

ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ನಡೆಯುವ ಮಾಸಿಕ ಸ್ವಚ್ಛತಾ ಕಾರ್ಯಕ್ರಮವು ವರ್ತಕರ ಸಂಘ ಐವರ್ನಾಡುರವರ ಸಹಯೋಗದೊಂದಿಗೆ ಅ.06 ರಂದು ನಡೆಯಿತು.


ಐವರ್ನಾಡು ಗ್ರಾಮ ಪಂಚಾಯತ್ ವಠಾರ ಹಾಗೂ ಮುಖ್ಯ ರಸ್ತೆಯ ಬದಿಯಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ವಠಾರದಿಂದ ಮರ್ವತಡ್ಕದವರೆಗೆ ನಡೆಯಿತು.

ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕರು ಹಾಗೂ ಐವರ್ನಾಡು ವರ್ತಕರ ಸಂಘದ ಅಧ್ಯಕ್ಷರು, ಹಾಗೂ ಸದಸ್ಯರುಗಳು ಹಾಗೂ ಐವರ್ನಾಡು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಊರಿನ ಪ್ರಮುಖರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.