ಆಲೆಟ್ಟಿ ಪ್ರೌಢಶಾಲಾ ಶಿಕ್ಷಕಿ ರೇವತಿ ಮದುವೆಗದ್ದೆ ಮುಖ್ಯ ಶಿಕ್ಷಕಿಯಾಗಿ ಭಡ್ತಿ

0

ಆಲೆಟ್ಟಿ ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕಿ ಶ್ರೀಮತಿ ರೇವತಿ ಮದುವೆಗದ್ದೆ ಯವರು ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ ದೋಳ್ಪಾಡಿ ಸರಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡಿರುತ್ತಾರೆ.

ಇವರು ಆರಂಭದಲ್ಲಿ ಅಜ್ಜಾವರ ಸರಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದು, 1996 ರಲ್ಲಿ ಸಹ ಶಿಕ್ಷಕಿಯಾಗಿ ಸುಳ್ಯ ಗಾಂಧಿನಗರ ಶಾಲೆಗೆ ಖಾಯಂ ಶಿಕ್ಷಕರಾಗಿ ಸೇರ್ಪಡೆಗೊಂಡು ಸುಮಾರು 19 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಬಳಿಕ ಅಲ್ಲಿಂದ ವರ್ಗಾವಣೆಯಾಗಿ 2015 ರಲ್ಲಿ ಆಲೆಟ್ಟಿ ಸರಕಾರಿ ಶಾಲೆಗೆ ಕರ್ತವ್ಯಕ್ಕೆ ಹಾಜರಾಗಿದ್ದು ಸುಮಾರು 9 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.


ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿದ ಅವರು ಪುತ್ತೂರು ತಾಲೂಕಿನ ಸರಕಾರಿ ಪ್ರೌಢಶಾಲೆ ದೋಳ್ಪಾಡಿಗೆ ವರ್ಗಾವಣೆಗೊಂಡಿರುವುದಾಗಿ ತಿಳಿದು ಬಂದಿದೆ.


ಪತಿ ನಿವೃತ್ತ ಯೋಧ ಸಂಜೀವ ಗೌಡ ಮದುವೆಗದ್ದೆ ಹಾಗೂ ಓರ್ವ ಪುತ್ರ ಕೌಶಿಕ್ ಮದುವೆಗದ್ದೆ ವಿದೇಶದಲ್ಲಿ ಉದ್ಯೋಗಿ. ಓರ್ವ ಪುತ್ರಿ ಕು.ಮನೀಷಾ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿ. ಪ್ರಸ್ತುತ ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದಲ್ಲಿ ವಾಸವಾಗಿದ್ದಾರೆ.