ಪಂಜ ಸೀಮೆಯ ದೇವಳದಲ್ಲಿ ಆಯುಧ ಪೂಜೆ

0

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅ.11 ರಂದು ಮುಂಜಾನೆಯಿಂದ ಆಯುಧ ಪೂಜೆ ಆರಂಭ ಗೊಂಡಿದ್ದು ಭಕ್ತಾದಿಗಳು ವಾಹನ ಪೂಜೆ ಮಾಡಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸುತ್ತಿದ್ದಾರೆ.

ಪೂರ್ವಾಹ್ನ ಆರಂಭ ಗೊಂಡಿದ್ದು ಸಂಜೆ ಗಂಟೆ 5 ರಿಂದ ರಾತ್ರಿ 9.30 ತನಕ ನಿರಂತರ ನಡೆಯಲಿದೆ.

ದೇವಳದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಪ್ರತಿ ದಿನ ನವರಾತ್ರಿ ಪೂಜೆ ನಡೆಯುತ್ತಿದ್ದು ಇಂದು (ಅ.11) ಸಂಜೆ ಗಂಟೆ 6 ರಿಂದ ವನಿತ ಸಮಾಜ (ರಿ) ಪಂಜ ವತಿಯಿಂದ ಭಜನಾ ಸಂಕೀರ್ತನೆ, ಕುಮಾರಿ ಹೇಮಾಸ್ವಾತಿ ಕುರಿಯಾಜೆ ಮತ್ತು ತಂಡ ಇವರಿಂದ ಭರತನಾಟ್ಯ ಮತ್ತು ಯಕ್ಷಗಾನ ಭಾಗವತಿಕೆ ಜರುಗಲಿದೆ.

ಅ. 12 ರಂದು ಯುವ ಸ್ಫೂರ್ತಿ ಕಲ್ಮಡ್ಕ ಇವರಿಂದ ಭಜನಾ ಸಂಕೀರ್ತನೆ.ಶ್ರೀಮತಿ ಚೈತ್ರಿಕ ಕೋಡಿಬೈಲು ರವರಿಂದ ಸಂಗೀತ ಸೇವೆ ಜರುಗಲಿದೆ.


ಪ್ರತಿ ದಿನ ಶ್ರೀ ದೇವರಿಗೆ ಮಹಾ ಪೂಜೆ, ಪ್ರಸಾದ ವಿತರಣೆ , ಅನ್ನ ಸಂತರ್ಪಣೆ.


ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ಮತ್ತು ಅಷ್ಟಾವಾದನ ಕಾರ್ಯಕ್ರಮ ಸಂಜೆ ಗಂಟೆ 6ರಿಂದ ರಾತ್ರಿ 8.30 ರ ತನಕ ನಡೆಯಲಿದೆ.

ಪ್ರತಿ ದಿನ ಭಜನಾ ಸಂಕೀರ್ತನ ಸಂಜೆ ಗಂಟೆ 6 ರಿಂದ 7: 45 ರ ತನಕ ಮತ್ತು ಅಷ್ಟಾವಾದನ ಕಾರ್ಯಕ್ರಮ ರಾತ್ರಿ ಗಂಟೆ 8 ರಿಂದ 8:30 ತನಕ ನಡೆಯಲಿದೆ.