ಕಲ್ಚೆರ್ಪೆ ಪೆರಾಜೆ ಸಿರಿಕುರಲ್ ನಗರದ ವನದುರ್ಗಾ ರಕ್ತೇಶ್ವರಿ ಸಾನಿಧ್ಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

0

ಆಲೆಟ್ಟಿ ಗ್ರಾಮದ ಕಲ್ಚೆರ್ಪೆ ಪೆರಾಜೆ ಸಿರಿಕುರಲ್ ನಗರದ ಶ್ರೀ ವನದುರ್ಗಾ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ಸಾನಿಧ್ಯದಲ್ಲಿ 7 ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ಬಂಭ್ರಾಣಶಂಕರನಾರಾಯಣ ಕಡಮಣ್ಣಾಯ ತಂತ್ರಿಯವರ ನೇತೃತ್ವದಲ್ಲಿ ಇಂದು ಜರುಗಿತು.

ಬೆಳಗ್ಗೆ ಸ್ಥಳ ಶುದ್ಧಿಯಾಗಿ ಗಣಪತಿಹವನ,ವನದುರ್ಗಾ ಹೋಮ ಆಶ್ಲೇಷ ಬಲಿ‌ ತಂಬಿಲ ಸೇವೆಯು ಅರ್ಚಕರಾದ ಜಯರಾಮ ಬಳ್ಳುಳ್ಳಾಯ, ಸುಬ್ರಹ್ಮಣ್ಯ ಪಾಂಗಣ್ಣಾಯ, ರಮೇಶ ಮೂಡಿತ್ತಾಯ, ಕ್ಷೇತ್ರ ಪುರೋಹಿತರಾದ ವೇ.ಮೂ.ಅಭಿರಾಮ ಭಟ್ ಸರಳಿಕುಂಜ ರವರ ನೇತೃತ್ವದಲ್ಲಿ ನಡೆದು
ಮಧ್ಯಾಹ್ನ ಮಹಾಪೂಜೆಯಾಗಿ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಯಿತು.

ಈ ಸಂದರ್ಭದಲ್ಲಿ ಭಕ್ತರಿಂದ ಹರಕೆಯ ದೀಪ ‌ಹಾಗೂ ಇನ್ನಿತರ ವಸ್ತು ರೂಪದ ಕಾಣಿಕೆಯನ್ನು ದೇವರಿಗೆಸಮರ್ಪಿಸಲಾಯಿತು. ಬೆಳಗ್ಗೆ ವಿವಿಧ ಭಜನಾ ತಂಡದ ಸದಸ್ಯರಿಂದ ಭಜನಾ ‌ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷ ಗೋಕುಲ್ ದಾಸ್ ಸುಳ್ಯ, ಸಂಚಾಲಕ ಅಶೋಕ ಪೀಚೆಮನೆ, ಉಪಾಧ್ಯಕ್ಷ ಅರವಿಂದ ಕರಕರನ,ಜತೆಕಾರ್ಯದರ್ಶಿ ವೆಂಕಟೇಶ ಕಲ್ಚೆರ್ಪೆ, ಕೋಶಾಧಿಕಾರಿ ಬೆಳ್ಯಪ್ಪ ಗೌಡಐವರ್ನಾಡು,ದೇವಿಯ ಪರಿಚಾರಕರಾದ ಜನಾರ್ದನ ಚೊಕ್ಕಾಡಿ, ದೈವದ ಪೂಜಾರಿ ರಾಮ ನಾಯ್ಕ ಕಲ್ಚೆರ್ಪೆ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಆಗಮಿಸಿದ ಭಕ್ತಾದಿಗಳಿಗೆ ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು.