ಪಂಜ : ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಪೂಜೆ

0

🔸 ಇಂದು (ಅ.12) ಶ್ರೀಮತಿ ಚೈತ್ರಿಕ ಕೋಡಿಬೈಲು ರವರಿಂದ ಸಂಗೀತ ಸೇವೆ


🔸 ಯುವ ಸ್ಫೂರ್ತಿ ಕಲ್ಮಡ್ಕ ರವರಿಂದ ಭಜನೆ

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಪೂಜೆ ಅ3 ರಂದೂ ಆರಂಭ ಗೊಂಡಿದ್ದು ,ಅ.12 ತನಕ ಪ್ರತಿ ದಿನ ಶ್ರೀ ದೇವರಿಗೆ ಮಹಾ ಪೂಜೆ, ಪ್ರಸಾದ ವಿತರಣೆ , ಅನ್ನ ಸಂತರ್ಪಣೆ.
ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ಮತ್ತು ಅಷ್ಟಾವಾದನ ಕಾರ್ಯಕ್ರಮ ಸಂಜೆ ಗಂಟೆ 6ರಿಂದ ರಾತ್ರಿ 8.30 ರ ತನಕ ನಡೆಯಲಿದೆ.

ಅ.11 ರಂದು ವನಿತ ಸಮಾಜ (ರಿ) ಪಂಜ ವತಿಯಿಂದ ಭಜನಾ ಸಂಕೀರ್ತನೆ .ಕುಮಾರಿ ಹೇಮಾ ಸ್ವಾತಿ ಕುರಿಯಾಜೆ ಮತ್ತು ತಂಡ ಇವರಿಂದ ಭರತನಾಟ್ಯ ಮತ್ತು ಯಕ್ಷಗಾನ ಭಾಗವತಿಕೆ ಜರುಗಿತು.. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ , ವ್ಯವಸ್ಥಾಪನಾ ಸಮಿತಿ ಸದಸ್ಯರು, ಗೌರವ ಸಲಹೆಗಾರರು,ಸೀಮೆಯ ಭಕ್ತಾದಿಗಳು ಉಪಸ್ಥಿತರಿದ್ದರು.


‌ಅ. 12 ರಂದು ಯುವ ಸ್ಫೂರ್ತಿ ಕಲ್ಮಡ್ಕ ಇವರಿಂದ ಭಜನಾ ಸಂಕೀರ್ತನೆ.ಶ್ರೀಮತಿ ಚೈತ್ರಿಕ ಕೋಡಿಬೈಲು ರವರಿಂದ ಸಂಗೀತ ಸೇವೆ ಜರುಗಲಿದೆ.