ಗುತ್ತಿಗಾರು ಪದವಿಪೂರ್ವ ಕಾಲೇಜಿನ ರೋಶನ್ ಕೆ. ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

0


ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ ) ದ.ಕ ಜಿಲ್ಲೆ ಹಾಗೂ ಕೆ.ಎಸ್ ಗೌಡ ವಿದ್ಯಾಸಂಸ್ಥೆ ಇದರ ಕೆ.ಎಸ್.ಪದವಿ ಪೂರ್ವ ಕಾಲೇಜು ನಿಂತಿಕಲ್ಲು ಇವರ ಜಂಟಿ ಆಶ್ರಯದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ವಿದ್ಯಾರ್ಥಿಗಳು ಭಾಗವಹಿಸಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ರೋಶನ್.ಕೆ ಇವರು 100 ಮೀ ಓಟ ಹಾಗೂ ಹೈ ಜಂಪ್ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದು ಅಕ್ಟೋಬರ್ 22ರಂದು ಆಳ್ವಾಸ್ ವಿದ್ಯಾಸಂಸ್ಥೆ ಮೂಡುಬಿದಿರೆ ಇಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.