
ಇಂದು ಸಂಜೆ ಪೈಚಾರು ಸಮೀಪದ ಆರ್ತಾಜೆಯಲ್ಲಿ ಬೈಕ್ ಅಪಘಾತದಲ್ಲಿ ಮೃತಪಟ್ಟವರು ಐವರ್ನಾಡು ಸೊಸೈಟಿಯ ಉದ್ಯೋಗಿ ಪಾಲೆಪ್ಪಾಡಿಯ ಭೋಜಪ್ಪ ಗೌಡ(50) ಎಂದು ತಿಳಿದು ಬಂದಿದೆ.
ಇವರು ಐವರ್ನಾಡಿನಿಂದ ಸುಳ್ಯಕ್ಕೆ ಬರುವಾಗ ಬುಲೆಟ್ ಬೈಕ್ ಇವರ ಶೈನ್ ಬೈಕ್ ಗೆ ಡಿಕ್ಕಿ ಹೊಡೆದಿತ್ತು.

ಬುಲ್ಲೆಟ್ ಸವಾರರಾದ ನೆಲ್ಲೂರು ಕೆಮ್ರಾಜೆ ಗ್ರಾಮದ ಮಂದ್ರಪ್ಪಾಡಿಯ ವಸಂತ ಮಡಿವಾಳ ಮತ್ತು ಅರುಣ್ ಮಡಿವಾಳರವರಿಗೂ ಕೂಡ ಗಾಯಗಳಾಗಿದ್ದು, ಅವರು ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
















ಅಪಘಾತ ನಡೆದ ವೇಳೆ ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಭೋಜಪ್ಪ ಗೌಡರನ್ನು ಸ್ಥಳೀಯ ಗ್ರಾಮ ಪಂಚಾಯತ ಸದಸ್ಯ ಮುಜೀಬ್ ಪೈಚಾರ್, ಮತ್ತು ಆಟೋ ಚಾಲಕ ನಾಗೇಶ್ ರವರು ತಮ್ಮ ಆಟೋದಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ತಂದರು.










