ಸುಳ್ಯ ಜಯನಗರದ ಮಹಿಳೆ ಕಾಸರಗೋಡು ಗಂಡನ ಮನೆಯಲ್ಲಿ ಮೃತ್ಯು

0

ಮಹಿಳೆಯ ಸಾವಿನ ಬಗ್ಗೆ ಕುಟುಂಬಸ್ಥರಲ್ಲಿ ಅನುಮಾನ

ಜಯನಗರ ನಿವಾಸಿ ದಿ. ಇಸ್ಮಾಯಿಲ್ ಎಂಬವರ ಪುತ್ರಿ ಶೈಮಾ (35 ವರ್ಷ) ಎಂಬವರು ಕಾಸರಗೋಡು ಪೊವ್ವಲ್ ನಲ್ಲಿ ಅ. 15ರಂದು ರಾತ್ರಿ ಮೃತಪಟ್ಟಿದ್ದಾರೆ.

ದಿ.ಇಸ್ಮಾಯಿಲ್ ರವರು ಮೂಲತ: ಜಟ್ಟಿಪಳ್ಳ ನಿವಾಸಿಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಜಯನಗರದಲ್ಲಿ ವಾಸಿಸುತ್ತಿದ್ದಾರೆ. ಅವರು ಕಳೆದ ಎರಡು ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದು ಅವರ ಕುಟುಂಬ ಸದಸ್ಯರು ಜಯನಗರದ ಮನೆಯಲ್ಲಿ ಇದ್ದಾರೆ.

ಶೈಮಾರವರನ್ನು ಪೊವ್ವಲ್ ನಿವಾಸಿ ಜಾಫರ್ ಎಂಬವರಿಗೆ ಕಳೆದ ಸುಮಾರು 6 ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು.
ಅವರಿಗೆ ಐವರು ಹೆಣ್ಣು ಮಕ್ಕಳಿದ್ದು, ಶೈಮಾರವರು ಅ. 16 ರಂದು ಬೆಳಿಗ್ಗೆ ತಮ್ಮ ಮನೆಯಲ್ಲಿ ಮೃತ ಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ ಎನ್ನಲಾಗಿದೆ.

ಈ ಘಟನೆ ಬಗ್ಗೆ ಕುಟುಂಬಸ್ಥರಲ್ಲಿ ಹಲವು ಅನುಮಾನಕ್ಕೆ ಎಡೆಮಾಡಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.