ವಿಧಾನ ಪರಿಷತ್ ಚುನಾವಣೆ: ನಗರ ಪಂಚಾಯತ್ ಬೂತ್‌ನಲ್ಲಿ 20 ಮತಗಳ ಚಲಾವಣೆ

0


ವಿಧಾನ ಪರಿಷತ್ ಚುನಾವಣೆಗೆ ಮತಚಲಾವಣಾ ಕಾರ್ಯ ಸುಳ್ಯ ನಗರ ಪಂಚಾಯತ್ ಮತ್ತು ಸುಳ್ಯ ತಾಲೂಕಿನ ಗ್ರಾ.ಪಂ.ಗಳಲ್ಲಿ ನಡೆಯುತ್ತಿದ್ದು, ನ. ಪಂ.ನಲ್ಲಿ ಒಟ್ಟು 21 ಮತದಾರರಲ್ಲಿ ಶಾಸಕರೂ ಸೇರಿದಂತೆ 20 ಮಂದಿ ಮತ ಚಲಾಯಿಸಿದ್ದಾರೆ. ಬಿಜೆಪಿಯ ಎಲ್ಲಾ 14 ಮಂದಿ ಸದಸ್ಯರು, ಶಾಸಕಿ ಕು.ಭಾಗೀರಥಿ, ಕಾಂಗ್ರೆಸ್‌ನ ನಾಲ್ವರು ಸದಸ್ಯರು ಮತ್ತು ಓರ್ವ ಪಕ್ಷೇತರ ಸದಸ್ಯರು ಮತ ಚಲಾಯಿಸಿದ್ದು, ಕಾಂಗ್ರೆಸ್ ಸದಸ್ಯ ಶರೀಫ್ ಕಂಠಿಯವರು ಇನ್ನಷ್ಟೇ ಬರಬೇಕಾಗಿದೆ.


ಇದೇ ರೀತಿ ಸುಳ್ಯ ತಾಲೂಕಿನಾದ್ಯಂತ 35 ಗ್ರಾ.ಪಂ.ಗಳಲ್ಲಿ ಕೂಡಾ ಶೇ. 70- 80ರಷ್ಟು ಮತದಾನವಾಗಿರುವ ಮಾಹಿತಿಗಳು ಲಭ್ಯವಾಗಿವೆ.