ದಿವಾಕರ ಅಂದರೆ ಸೂರ್ಯ, ಸೂರ್ಯ ಉದಯಿಸುವ ಮೊದಲೇ ಅಸ್ತಂಗತನಾದ: ಚಂದ್ರಹಾಸ ಶಿವಾಲ
ಇತ್ತೀಚೆಗೆ ನಿಧರಾದ ದಿವಾಕರ ಮಂಡಾಜೆ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಇಂದು ಹರಿಹರೇಶ್ವರ ಕಲಾ ಮಂದಿರದಲ್ಲಿ ನಡೆಯಿತು.
ದಿವಾಕರ ಅಂದರೆ ಸೂರ್ಯ ಅ.16 ರಂದು ಅಂದು ಸೂರ್ಯ ಉದಯಿಸಿದ ಕೆಲವೇ ಕ್ಷಣಗಳಲ್ಲಿ ದಿವಾಕರ ಅಸ್ತಂಗವಾದರು ನಮಗೆ ಸಿಡಲಾಘಾತವಾಗಿದೆ. ಹರಿಹರೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವ ಸಮಯದ ಸೇವೆ ಹಾಗೂ ಪ್ರತಿ ಶನಿವಾರ ದೇವಾಲಯದಲ್ಲಿದ್ದು ಅವರ ತಮ್ಮ ಸೇವೆಯನ್ನು ಮಾಡುತಿದ್ದರು. ಇನ್ನೊಬ್ಬರು ಅಂತಹ ಕರ್ತವ್ಯ ಮಾಡಲು ಸೀಗುವುದು ಕಷ್ಟ. ಮಕ್ಕಳನ್ನು ಪ್ರೀಯಿಂದ ಕಾಣುವ ಮಾಸ್ಟರ್ ಅವರು ಎಂದು ಚಂದ್ರಹಾಸ ಶಿವಾಲ ಪ್ರಾಸ್ತಾವಿಕ ನುಡಿಯೊಂದಿಗೆ ನುಡಿ ನಮನ ಮಾಡಿದರು.
ಹರಿಹರ ಗ್ರಾಮ ಪಂಚಾಯತ್ ನ ನೇತೃತ್ವದಲ್ಲಿ, ಹರಿಹರೇಶ್ವರ ದೇವಾಲಯದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಹರಿಹರೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು, ಹರಿಹರ ಗ್ರಾ.ಪಂ ಅಧ್ಯಕ್ಷ ವಿಜಯಕುಮಾರ್ ಅಂಙಣ , ದಿವಾಕರ ಮುಂಡಾಜೆ ಅವರ ತಂದೆ ಲಿಂಗಪ್ಪ ಗೌಡ ಮುಂಡಾಜೆ, ತಾಯಿ ಭಾಗೀರಥಿ, ಮಾವ ಲಿಂಗಪ್ಪ ಗೌಡ ಕಡೆಂಬ್ಯಾಲು ಕೊಯಿಲ ಉಪಸ್ಥಿತರಿದ್ದರು. ಚಂದ್ರಹಾಸ ಶಿವಾಲ ಪ್ರಾಸ್ತಾವಿಕ ಮಾತನಾಡಿದರು. ಜಾಕೆ ಮಾದವ ಗೌಡ, ಡಾ. ಚಂದ್ರಶೇಖರ ಕಿರಿಭಾಗ, ಡಾl ಗೋವಿಂದ ಎನ್.ಎಸ್, ಲೊಕೇಶ್ ಬಿ.ಎನ್, ಹಿಮ್ಮತ್ ಕೆ.ಸಿ, ವೆಂಕಟ್ ವಳಲಂಬೆ ನುಡಿನಮನ ಸಲ್ಲಿಸಿದರು. ಪಿ.ಡಿ.ಒ ಶ್ಯಾಮ್ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.