ದುಗ್ಗಲಡ್ಕ, ಕೊಯಿಕುಳಿ, ಮಿತ್ತಡ್ಕ, ಮರ್ಕಂಜ, ಮುಡ್ನೂರು ಮರ್ಕಂಜ ಶಾಲೆಗಳಿಗೆ ಹಸ್ತಾಂತರ

ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಸುಳ್ಯ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರಾಯೋಜಕರ ಸಹಕಾರದೊಂದಿಗೆ ಶಾಲೆಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಭಾವಚಿತ್ರ ಅನಾವರಣ ಕಾರ್ಯಕ್ರಮ ನಡೆಯುತ್ತಿದ್ದು, ಇಂದು ಕೊಯಿಕುಳಿ, ದುಗ್ಗಲಡ್ಕ, ಮಿತ್ತಡ್ಕ, ಮರ್ಕಂಜ, ಮುಡ್ನೂರು ಮರ್ಕಂಜ ಸರಕಾರಿ ಶಾಲೆಗಳಿಗೆ ಭಾವಚಿತ್ರ ಹಸ್ತಾಂತರಿಸಲಾಯಿತು.









ದುಗ್ಗಲಡ್ಕ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಸುರೇಶ್ ಕುಮಾರ್ ರಿಗೆ ಪ್ರಾಯೋಜಕರಾದ ಸುಳ್ಯ ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆ ಚಿಂತನ್ ಸುಬ್ರಹ್ಮಣ್ಯರವರು ಹಸ್ತಾಂತರ ಮಾಡಿದರು.ಇನ್ನರ್ ವೀಲ್ ಕ್ಲಬ್ ಐಎಸ್ಒ ಸೌಮ್ಯ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಕೊಯಿಕುಳಿ ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕಿ ಶ್ರೀಮತಿ ಪಲ್ಲವಿಯವರಿಗೆ ಚಿಂತನ ಸುಬ್ರಹ್ಮಣ್ಯ ಹಸ್ತಾಂತರಿಸಿದರು.

ಮರ್ಕಂಜದ ಮಿತ್ತಡ್ಕ ಶಾಲೆಗೆ ದಾಮೋದರ ಪಾಟಾಳಿ ಮಿತ್ತಡ್ಕರವರು ಭಾವಚಿತ್ರ ಕೊಡುಗೆಯಾಗಿ ನೀಡಿದ್ದು, ಮುಖ್ಯ ಶಿಕ್ಷಕಿ ಶ್ರೀಮತಿ ರೋಹಿಣಿ ಸ್ವೀಕರಿಸಿದರು. ಮರ್ಕಂಜ ಸರಕಾರಿ ಪ್ರೌಢ ಶಾಲೆಗೆ ಅದೇ ಶಾಲೆಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿಭಾಸ್ಕರ್ ಕೊಡುಗೆಯಾಗಿ ನೀಡಿದ್ದು, ಶಿಕ್ಷಕರಿಗೆ ಹಸ್ತಾಂತರ ಮಾಡಲಾಯಿತು. ಮುಡ್ನೂರು ಮರ್ಕಂಜ ಶಾಲೆಗೆ ಸುಳ್ಯ ರೋಟರಿ ಸಿಟಿಯ ಪೂರ್ವಾಧ್ಯಕ್ಷ ಮುರಳೀಧರ ರೈ ಕೊಡುಗೆಯಾಗಿ ನೀಡಿದ್ದು, ಮುಖ್ಯ ಶಿಕ್ಷಕ ದೇವರಾಜ್ ಸ್ವೀಕರಿಸಿದರು. ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಕಸಾಪ ತಾಲೂಕು ಘಟಕದ ನಿರ್ದೇಶಕ ರಮೇಶ್ ನೀರಬಿದಿರೆ ಕಾರ್ಯಕ್ರಮದ ಉದ್ದೇಶದ ಕುರಿತು ಮಾತನಾಡಿದರು. ಸುಳ್ಯ ಹೋಬಳಿ ಘಟಕದ ಸಂಘಟನಾ ಕಾರ್ಯದರ್ಶಿ ಕೆ.ಟಿ.ಭಾಗೀಶ್ ಉಪಸ್ಥಿತರಿದ್ದರು.










