7ನೇ ವೇತನ ಆಯೋಗದ ಶಿಫಾರಸ್ಸಿನ ಹೆಚ್ಚುವರಿ ಸಂಬಳದ ಸಂಪೂರ್ಣ ಹಣವನ್ನ ಆಂಬುಲೆನ್ಸ್ ಸೇವಾ ಯೋಜನೆಗೆ ನೀಡಿದ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಿಬ್ಬಂದಿ ಶಿವಪ್ರಸಾದ್ ಕೆ. ವಿ.

0

7ನೇ ವೇತನ ಆಯೋಗದ ಶಿಫಾರಸ್ಸಿನನ್ವಯ ಸರಕಾರಿ ನೌಕರರಿಗೆ ಹೆಚ್ಚಳವಾದ ವೇತನದಲ್ಲಿ ಪ್ರಥಮ ತಿಂಗಳಿನ ಸಂಪೂರ್ಣ ಮೊತ್ತವನ್ನು ಶಿವಪ್ರಸಾದ್ ಕೆ.ವಿ. ತನ್ನ ಹುಟ್ಟೂರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ಇವರ ವತಿಯಿಂದ ಸೇವೆ ನೀಡುತ್ತಿರುವ ಆಂಬುಲೆನ್ಸ್ ಮತ್ತು ಇತರ ಸೇವಾ ಯೋಜನೆಗಳಿಗೆ ಹಸ್ತಾಂತರ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಬಿ.ಇ.ಒ.ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕ ಕಿಶೋರ್ ಕುಮಾರ್ ಯು.ವಿ. ಅಧೀಕ್ಷಕರಾದ ಶಿವಪ್ರಸಾದ್ ಜಿ.ಎಸ್., ಕಛೇರಿ ಸಿಬ್ಬಂದಿಗಳಾದ ರತ್ನಾಕರ ಕೆ, ಸನತ್ ಪಿ.ಎನ್., ಪೃಥ್ವಿಕುಮಾರ್ ಟಿ ಹಾಗೂ ಭಾರತೀಯ ರೆಡ್‍ ಕ್ರಾಸ್ ಸಂಸ್ಥೆಯ ಸಭಾಪತಿ ಸುಧಾಕರ ರೈ, ಉಪಸಭಾಪತಿ ಕೆ. ಎಂ.ಮುಸ್ತಾಫ, ಕಾರ್ಯದರ್ಶಿ ತಿಪ್ಪೇಶಪ್ಪ ಹೆಚ್.ಟಿ. ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕಿಯರು, ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.