ಅಕ್ರಮ ಸರಬರಾಜು ಎಂಬ ಆರೋಪ, ಪೊಲೀಸರಿಂದ ಪರಿಶೀಲನೆ
ತಮಿಳುನಾಡು ರಿಜಿಸ್ಟೇಶನ್ ಹೊಂದಿರುವ ಲಾರಿ ಯಲ್ಲಿ ಅ 26 ರಂದು ಸಂಜೆ ಸುಳ್ಯಕ್ಕೆ ಪಟಾಕಿ ಬಂದಿದ್ದು, ಇದು ಅಕ್ರಮ ಮಾರಾಟಕ್ಕೆ ಬಂದಿದೆ ಎಂಬ ಆರೋಪ ಕೇಳಿಬಂದಿದೆ.
ಈ ವಿಷಯ ತಿಳಿದ ಸುಳ್ಯ ಪೊಲೀಸರು ಸ್ಥಳಕ್ಕೆ ತೆರಳಿ ಲಾರಿ ಚಾಲಕನ ಬಳಿ ವಿಚಾರಿಸಿ ಚಾಲಕನನ್ನು ಠಾಣೆಗೆ ಕರೆದೊಯ್ದಿದ್ದಾರೆ.
ಲಾರಿಯನ್ನು ವಿಷ್ಣು ಸರ್ಕಲ್ ಬಳಿ ಅರಣ್ಯ ಇಲಾಖೆ ಸಮೀಪ ನಿಲ್ಲಿಸಲಾಗಿದೆ.
ಮೇಲ್ನೋಟಕ್ಕೆ ದಾಖಲೆ ಪತ್ರಗಳು ಇದೆ ಎಂದು ಕೂಡ ಹೇಳಲಾಗುತ್ತಿದೆ
ಆದರೆ ಹೆಚ್ಚಿನ ಮಾಹಿತಿ ಇನ್ನು ಪೊಲೀಸರ ತನಿಖೆ ಬಳಿಕ ತಿಳಿಯ ಬೇಕಾಗಿದೆ.