ಮೂಡಬಿದಿರೆ ಕರಾವಳಿ ಮರಾಟಿ ಸಮಾವೇಶದ ಕುರಿತು ಪೂರ್ವಭಾವಿ ಸಭೆ

0

ನ.10 ರಂದು ವಿಜೃಂಭಣೆಯಿಂದ ನಡೆಯಲಿದೆ ಕಾರ್ಯಕ್ರಮ

ನ.10 ರಂದು ಮೂಡಬಿದಿರೆಯ ಆಳ್ವಾಸ್ ಆವರಣದಲ್ಲಿ ನಡೆಯಲಿರುವ ಕರಾವಳಿ ಮರಾಟಿ ಸಮಾವೇಶದಲ್ಲಿ ಭಾಗವಹಿಸುವ ಕುರಿತು ವಿಶೇಷ ಪೂರ್ವಭಾವಿ ಸಭೆ ಇಂದು ಸುಳ್ಯ ಗಿರಿದರ್ಶಿನಿಯಲ್ಲಿ ನಡೆಯಿತು.
ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘ, ಮಹಿಳಾ ವೇದಿಕೆ ಮತ್ತು ಯುವ ವೇದಿಕೆ ವತಿಯಿಂದ ಸಮಾಜ ಬಾಂಧವರ ಸಭೆ ಆಯೋಜಿಸಲಾಗಿತ್ತು.
ಮರಾಟಿ ಸಮಾವೇಶದ ಕಾರ್ಯಾಧ್ಯಕ್ಷರಾದ ರಾಮಚಂದ್ರ ಕೆಂಬಾರೆ ಸಮಾವೇಶದ ವ್ಯವಸ್ಥೆಯ ಬಗ್ಗೆ ಮಾತನಾಡಿ ಸುಳ್ಯ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಮರಾಟಿ ಬಾಂಧವರು ಭಾಗವಹಿಸುವಂತೆ ವಿನಂತಿಸಿದರು. ಆರ್ಥಿಕ ಸಮಿತಿಯ ಮಹಾಲಿಂಗ ನಾಯ್ಕ್ ಉಪಸ್ಥಿತರಿದ್ದರು.

ಸಭೆಯ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ನಾಯ್ಕ್ ಅಜ್ಜಾವರ ವಹಿಸಿದ್ದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ಜನಾರ್ದನ ಬಿ.ಕುರುಂಜಿಭಾಗ್, ಮಾಜಿ ಅಧ್ಯಕ್ಷರುಗಳಾದ ಗೋಪಾಲ ನಾಯ್ಕ್ ದೊಡ್ಡೇರಿ,ದಾಮೋದರ ಮಂಚಿ, ಎ.ಕೆ‌.ನಾಯ್ಕ್ ಚೊಕ್ಕಾಡಿ, ಡಾ.ಎಸ್.ರಂಗಯ್ಯ, ನಾರಾಯಣ ನಾಯ್ಕ್ ಬೀರಮಂಗಲ, ಜಿ.ಬಿ.ನಾಯ್ಕ್, ಗಿರಿಜಾ ಎಂ.ವಿ.,ಕಾರ್ಯದರ್ಶಿ ರಮೇಶ್ ನೀರಬಿದಿರೆ, ಖಜಾಂಚಿ ಐತಪ್ಪ ನಾಯ್ಕ್, ಮಹಿಳಾ ವೇದಿಕೆಯ ಅಧ್ಯಕ್ಷೆ ರೇವತಿ ದೊಡ್ಡೇರಿ, ಯುವ ವೇದಿಕೆಯ ಕಾರ್ಯದರ್ಶಿ ಮಿಥುನ್ ನಾಯ್ಕ್ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಮರಾಟಿ ಸಂಘ ದ ಮಾಜಿ ಅಧ್ಯಕ್ಷ ಎ.ಕೆ.ನಾಯ್ಕ್ ರವರು ಸಮ್ಮೇಳನದ ಪ್ರವೇಶ ದ್ವಾರಕ್ಕೆ ಒಂದೂವರೆ ಲಕ್ಷ ಕೊಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಸ್ವಾಗತಿಸಿ, ಕಾರ್ಯದರ್ಶಿ ರಮೇಶ್ ನೀರಬಿದಿರೆ ವಂದಿಸಿದರು.